- Advertisement -
- Advertisement -
ಬೆಳಗಾವಿ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಸಂವಿಧಾನಿಕ ಪದ ಬಳಕೆ ಪ್ರಕರಣಕ್ಕೆ ಎಂಎಲ್ಸಿ ಸಿ.ಟಿ.ರವಿ ಅವರನ್ನು ಬಂಧಿಸಲಾಗಿದೆ. ಹಿರೇಬಾಗೆವಾಡಿ ಠಾಣೆಯಲ್ಲಿ ದೂರು ದಾಖಲು ಹಿನ್ನೆಲೆ ಸಿ.ಟಿ.ರವಿ ಅವರನ್ನು ಹಿರೇಬಾಗೆವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಿ.ಟಿ.ರವಿ ಬಂಧನಕ್ಕೆ ಬಂದ ಪೋಲಿಸರಿಗೆ ಪಶ್ಚಿಮ ದ್ವಾರದಲ್ಲಿ ಧರಣಿ ಕುಳಿತು ಬಿಜೆಪಿ ಮುಖಂಡರು ಅಡ್ಡಿಪಡಿಸಿದ್ದಾರೆ. ಈ ನಡುವೆ ಪೋಲಿಸರಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸುವರ್ಣ ಸೌಧ ಪಶ್ಚಿಮ ದ್ವಾರದಲ್ಲಿ ಸಿ ಟಿ ರವಿ ಅವರ ಬಂಧನದ ಮೇಲೆ ಹೈಡ್ರಾಮಾ ಸೃಷ್ಟಿಯಾಗಿತ್ತು.
- Advertisement -