Saturday, June 27, 2026
Homeಕರಾವಳಿವಾಸ್ತವ ಅರಿಯದೇ ಸಬ್ ರಿಜಿಸ್ಟ್ರಾರ್ ಜೊತೆ ದರ್ಪ ತೋರಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ವಾಸ್ತವ ಅರಿಯದೇ ಸಬ್ ರಿಜಿಸ್ಟ್ರಾರ್ ಜೊತೆ ದರ್ಪ ತೋರಿದ ಪುತ್ತೂರು ಶಾಸಕ ಸಂಜೀವ ಮಠಂದೂರು

- Advertisement -
- Advertisement -

ವಿಟ್ಲ: ವಾಸ್ತವ ಅರಿಯದೇ ಸಬ್ ರಿಜಿಸ್ಟ್ರಾರ್ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಸಂಜೀವ ಮಠಂದೂರುರವ್ರು ದರ್ಪ ತೋರಿದ ಘಟನೆ ನಡೆದಿದೆ.

ನೀವು ಎಷ್ಟು ಗಂಟೆಗೆ ಕಚೇರಿಗೆ ಬರ್ತೀರಿ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಟ್ಲ ಸಬ್ ರಿಜಿಸ್ಟ್ರಾರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಟ್ಲ ಉಪನೋಂದಣಿ ಕಚೇರಿಗೆ ದಿಢೀರನೇ ಭೇಟಿ ನೀಡಿದ ಪುತ್ತೂರು ಶಾಸಕರು ಉಪ ನೋಂದಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರ ನೀಡಿದ ಉಪನೋಂದಣಾಧಿಕಾರಿ ಪ್ರೇಮಾರವ್ರು ನೀವು ಹಾಗೆ ಹೇಳಬೇಡಿ. ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೆ. ಕೆಲಸ ಮಾಡುತ್ತಿದ್ದೇನೆ. ಸರ್ವರ್ ಸಮಸ್ಯೆ ಇದೆ. ಇಬ್ಬರು ಮಾತ್ರ ಸಿಬ್ಬಂದಿ ಮಾತ್ರ ಇರೋದು. ಕಂಪ್ಯೂಟರ್ ಕೂಡಾ ಕೈ ಕೊಡುತ್ತಿದೆ. ಈ ಸಮಸ್ಯೆಯಿಂದ ಕೆಲಸಕಾರ್ಯ ತಡವಾಗುತ್ತದೆ. ನಾನು ಸಮಯಕ್ಕೆ ಸರಿಯಾಗಿ ಕರ್ತವ್ಯ ಹಾಜರಾಗುತ್ತಿದ್ದೇನೆ. ಟೋಕನ್ ನೀಡಿದ ಎಲ್ಲರ ಕೆಲಸ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದರು.

- Advertisement -

Latest News

error: Content is protected !!