Friday, May 3, 2024
Homeಕರಾವಳಿಉಡುಪಿಶಾಸಕ ರಘುಪತಿ ಭಟ್ ನೇತೃತ್ವದ 15 ಮಂದಿ‌ ಶಾಸಕರ ನಿಯೋಗ ಲೇಹ್‌ - ಲಡಾಕ್‌ ಗೆ...

ಶಾಸಕ ರಘುಪತಿ ಭಟ್ ನೇತೃತ್ವದ 15 ಮಂದಿ‌ ಶಾಸಕರ ನಿಯೋಗ ಲೇಹ್‌ – ಲಡಾಕ್‌ ಗೆ : ಅಧ್ಯಯನದ ಹೆಸರಿನಲ್ಲಿ ಮೋಜು ಮಸ್ತಿ? ಚರ್ಚೆಗೆ ಗ್ರಾಸವಾದ ಪ್ರವಾಸ..

spot_img
- Advertisement -
- Advertisement -

ಬೆಂಗಳೂರು: ಅಧ್ಯಯನದ ಹೆಸರಿನಲ್ಲಿ ವಿಧಾನಸಭೆ ಭರವಸೆ ಸಮಿತಿ ಶಾಸಕರ ನಿಯೋಗ ಲೇಹ್ – ಲಡಾಕ್ ಪ್ರವಾಸ ಕೈಗೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ. ಗುರುವಾರ ಬೆಳಗ್ಗೆ ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದ 15 ಮಂದಿ‌ ಶಾಸಕರ ನಿಯೋಗ ಲೇಹ್ – ಲಡಾಕ್ ಪ್ರವಾಸ ಕೈಗೊಂಡಿದೆ. ಕೇಂದ್ರಾಡಳಿತ ಪ್ರದೇಶ ಲೇಹ್ ಲಡಾಕ್‌ಗೆ ಅಧ್ಯಯನದ ಹೆಸರಿನಲ್ಲಿ ಶಾಸಕರು ಮೋಜು ಮಸ್ತಿಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿವೆ.

6 ದಿನಗಳ ಕಾಲ ಲೇಹ್ ಲಡಾಕ್‌ಗೆ ರಾಜ್ಯ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರು ಭೇಟಿ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೂರು ಪಕ್ಷಗಳ ಶಾಸಕರು ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿಯಲ್ಲಿ ಇದ್ದಾರೆ. ಆದರೆ ಅಧ್ಯಯನದ ನೆಪದಲ್ಲಿ ಶಾಸಕರು ಲೇಹ್ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿಯು ವಿಧಾನಸಭೆಯಲ್ಲಿ ಸಚಿವರು ಕೊಡುವ ಭರವಸೆಗಳ ಬಗ್ಗೆ ಗಮನ ಹರಿಸುವ ಜವಾಬ್ದಾರಿ ನಿರ್ವಹಣೆ ಮಾಡುತ್ತದೆ. ಸಚಿವರು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ, ಎಷ್ಟು ಈಡೇರಿಸಿಲ್ಲ ಎಂಬುದನ್ನು ಸದನದಲ್ಲಿ ಈ ಸಮಿತಿ ಮಂಡಿಸಬೇಕು. ಹೀಗಾಗಿ ಬೇರೆ ರಾಜ್ಯಗಳ ವಿಧಾನಸಭೆ ಸಮಿತಿಗಳೊಂದಿಗೆ ಅಧ್ಯಯನಕ್ಕೆ ತೆರಳುವುದು ಸಾಮಾನ್ಯ. ಆದರೆ ಲೇಹ್ನಲ್ಲಿ ಶಾಸನ ಸಭೆಯ ಆಡಳಿತವಿಲ್ಲ, ಅಲ್ಲಿರುವುದು ಲೆಫ್ಟಿನೆಂಟ್ ಗವರ್ನರ್ ಆಡಳಿತ. ಜೊತೆಗೆ ಲೇಹ್ – ಲಡಾಕ್ ಕೇಂದ್ರಾಡಳಿತ ಹೊಂದಿರುವ ರಾಜ್ಯ. ಹೀಗಾಗಿ ಅಲ್ಲಿ ನಮ್ಮ ವಿಧಾನಸಭೆಯಲ್ಲಿರುವಂತೆ ಸರ್ಕಾರಿ ಭರವಸೆಗಳ ಸಮಿತಿ ಇಲ್ಲ. ಹೀಗಾಗಿ ಲೇಹ್ನಲ್ಲಿ ನಮ್ಮ ಶಾಸಕರ ಸರ್ಕಾರಿ ಭರವಸೆಗಳ ಸಮಿತಿ ಏನು ಅಧ್ಯಯನ ಮಾಡಲಿದೆ ಎಂಬ ಪ್ರಶ್ನೆ ಮೂಡಿದೆ.

ಅಧ್ಯಯನ ಮಾಡಲು ಅಲ್ಲಿಯೂ ಕೂಡ ಸರ್ಕಾರಿ ಭರವಸೆಗಳ ಸಮಿತಿ ಇರಬೇಕು. ಅವರೊಂದಿಗೆ ಸಂವಾದ ಮಾಡಿ ಅಧ್ಯಯನ ಮಾಡಬೇಕು. ಆದರೆ ಲೇಹ್ – ಲಡಾಕ್ನಲ್ಲಿ ಭರವಸೆಗಳ ಸಮಿತಿಯೇ ಇಲ್ಲದಿರುವಾಗ ಅಧ್ಯಯನ ಪ್ರವಾಸದ ಅಗತ್ಯ ಏನಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

- Advertisement -
spot_img

Latest News

error: Content is protected !!