Saturday, June 6, 2026
Homeಕರಾವಳಿಮಂಗಳೂರು- ಬೆಂಗಳೂರು ರಾ.ಹೆ 75ರ ಶಿರಾಡಿ ಹೆದ್ದಾರಿಯಲ್ಲಿ ರಸ್ತೆ ಅಪಘಾತ; ಬಸ್ ಹಾಗೂ ಲಾರಿ ನಡುವೆ...

ಮಂಗಳೂರು- ಬೆಂಗಳೂರು ರಾ.ಹೆ 75ರ ಶಿರಾಡಿ ಹೆದ್ದಾರಿಯಲ್ಲಿ ರಸ್ತೆ ಅಪಘಾತ; ಬಸ್ ಹಾಗೂ ಲಾರಿ ನಡುವೆ ಅಪಘಾತ

- Advertisement -
- Advertisement -
ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾ.ಹೆ 75ರ ಶಿರಾಡಿಯ ಬರ್ಚನಹಳ್ಳಿ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಯಾಣಿಕನೋರ್ವ ಗಾಯಗೊಂಡ ಘಟನೆ ನಡೆದಿದೆ.

ಅಪಘಾತಕೀಡಾದವನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಗೂಡ್ಸ್ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವಾಹನಗಳೆರಡೂ ಜಖಂಗೊಂಡಿದ್ದು, ಶ್ರೀಕಾಂತ್ ಎಂಬವರ ಕಣ್ಣು ಮತ್ತು ಕಾಲಿಗೆ ಗಾಯವಾಗಿದೆ.

ಈ ಘಟನೆಯು ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ನಡೆದಿದೆ ಎನ್ನಲಾಗಿದೆ. ಬಸ್ ಚಾಲಕ ನೀಡಿದ
ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!