Sunday, June 7, 2026
Homeತಾಜಾ ಸುದ್ದಿಪಕ್ಷದ ಕಚೇರಿಯಲ್ಲಿ ಗಲಾಟೆ: ಮನನೊಂದು ನಿದ್ರೆ ಮಾತ್ರೆ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಶಾಸಕಿ

ಪಕ್ಷದ ಕಚೇರಿಯಲ್ಲಿ ಗಲಾಟೆ: ಮನನೊಂದು ನಿದ್ರೆ ಮಾತ್ರೆ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಶಾಸಕಿ

- Advertisement -
- Advertisement -

ಚೆನ್ನೈ: ತಮಿಳುನಾಡಿನ ಆಲಂಗುಲಂ ಶಾಸಕಿ ಪೂಂಗೋತೈ ಅಲ್ಲಡಿ ಅರುಣಾ ಅವರು ಇಂದು ನಿದ್ರೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕ ಪ್ರಮಾಣದಲ್ಲಿ ನಿದ್ರೆ ಮಾತ್ರೆ ಸೇವಿಸಿ ಮಲಗಿದ್ದ ಅರುಣಾ ಅವರು, ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಅವರನ್ನು ತಿರುನೆಲ್ವೇಲಿಯ ಶಿಪಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅರುಣಾ ಅವರು ಡಿಎಂಕೆ ಪಕ್ಷದ ಆಂತರಿಕ ವಿಚಾರಗಳಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ ಕಡಾಯಂನಲ್ಲಿ ನಡೆದ ಡಿಎಂಕೆ ಪಕ್ಷದ ಬೂತ್ ಸಮಿತಿ ಸಭೆಯಲ್ಲಿ, ಶಾಸಕಿಯನ್ನು ಕಡಾಯಂ ಕೇಂದ್ರ ಕಾರ್ಯದರ್ಶಿ ಕುಮಾರ್ ಅವರ ಬೆಂಬಲಿಗರು ನಿಂದಿಸಿದ್ದಾರೆ ಎನ್ನಲಾಗಿದೆ. ಪೂಂಗೋತೈ ಅವರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ವಾಗ್ವಾದದ ಬಳಿಕ ಕೆಲವು ಕಾರ್ಯಕರ್ತರು ಶಾಸಕಿ ಅರುಣಾ ಅವರ ವಿರುದ್ಧ ಧ್ವನಿ ಎತ್ತಿದ ನಂತರ ಅವರು ಸಭೆಯ ಮಧ್ಯದಲ್ಲಿಯೇ ಎದ್ದುಹೋದರು ಎನ್ನಲಾಗಿದೆ. ಆದರೆ, ಈ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

- Advertisement -

Latest News

error: Content is protected !!