Sunday, April 28, 2024
Homeಕರಾವಳಿಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ವಧರ್ಮೀಯ ಮುಖಂಡರನ್ನು ಭೇಟಿ‌ಯಾಗಿ ಚರ್ಚಿಸಿದ ಶಾಸಕ ಹರೀಶ್ ಪೂಂಜ

ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ವಧರ್ಮೀಯ ಮುಖಂಡರನ್ನು ಭೇಟಿ‌ಯಾಗಿ ಚರ್ಚಿಸಿದ ಶಾಸಕ ಹರೀಶ್ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ, ಇಂದು ತಾಲೂಕಿನ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಳಕಳಿಯ ಉದ್ಯಮಿಗಳನ್ನು ಶಾಸಕ ಹರೀಶ್ ಪೂಂಜ ಅವರು ಬೇಟಿಮಾಡಿ ಸಲಹೆ ಸಹಕಾರದ ಕುರಿತು ಚರ್ಚಿಸಿದರು.

ಧರ್ಮಸ್ಥಳದ‌‌ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಆರಂಭದಲ್ಲಿ ಕಂಡು ಮಾತನಾಡಿಸಿದ ಶಾಸಕರು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯಯೋಜನೆಗಳನ್ನು ವಿವರಿಸಿ ಮಾರ್ಗದರ್ಶನ ಪಡೆದರು. ಬಳಿಕ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಸಲಹೆ ಪಡೆದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಬೆಳ್ತಂಗಡಿ ತಾಲೂಕಿನ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಲಾರೆನ್ಸ್ ಮುಕ್ಕುಯಿ, ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ, ಸಾಮಾಜಿಕ ಮುಂದಾಳುಗಳಾದ ಬರೋಡದ ಉದ್ಯಮಿ ನವಶಕ್ತಿ ಶಶಿಧರ ಶೆಟ್ಟಿ ಗುರುವಾಯನಕೆರೆ, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್ ಬಿ.ಕೆ, ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್, ಸಂಧ್ಯಾ ಟ್ರೇಡರ್ಸ್ ರಾಜೇಶ್ ಪೈ, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ, ಸಹಕಾರಿ ಧುರೀಣ ಎಚ್ ಪದ್ಮ ಗೌಡ ಬೆಳಾಲು ಮೊದಲಾದವರನ್ನು ಒಂದೇ ದಿನ ಭೇಟಿ ಮಾಡಿದರು.

- Advertisement -
spot_img

Latest News

error: Content is protected !!