- Advertisement -
- Advertisement -
ಮಂಗಳೂರು: ಇಲ್ಲಿನ ಅಡ್ಯಾರ್ ಎಂಬಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಮದುವೆ ಮನೆಯಲ್ಲಿ ರಿಸೆಪ್ಸನ್ ಪಾರ್ಟಿ ನಡೆಸಿ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿದ್ದ ಮದುಮಗನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಯಾರ್ನ ಗುಡ್ಡೆಮನೆ ಎಂಬಲ್ಲಿನ ರಂಜಿತ್ ಶೆಟ್ಟಿಗಾರ್ ಅವರ ಮದುವೆ ಮೇ 9 ರಂದು ಬಂಟ್ವಾಳದ ಸಿದ್ದಕಟ್ಟೆಯಲ್ಲಿ ನಡೆದಿತ್ತು. ಈ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಡ್ಯಾರ್ ಗ್ರಾಮ ಪಂಚಾಯಿತಿ ಪಿ ಡಿ ಓ ಕೃಷ್ಣ ನಾಯ್ಕ್ ಹೆಚ್ ಅವರು 25 ಮಂದಿಗೆ ಅನುಮತಿ ನೀಡಿದ್ದರು.
ಆದರೆ, ಮದುವೆ ಕಾರ್ಯಕ್ರಮ ಮುಗಿಸಿದ ನಂತರ ಮನೆಯಲ್ಲಿ ರಿಸೆಪ್ಶನ್ ಆಯೋಜಿಸಲಾಗಿದೆ. ಮೈಕ್ ಅಳವಡಿಸಿ ಸಾರ್ವಜನಿಕರನ್ನು ಸೇರಿಸಿ ಡ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಇಂದು ವೈರಲ್ ಆಗಿದೆ. ಈ ವಿಡಿಯೋ ಆಧಾರದ ಮೇಲೆ ಅಡ್ಯಾರ್ ಪಿ ಡಿ ಓ ಅವರು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಮದುಮಗನ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -