Thursday, June 4, 2026
Homeಕರಾವಳಿಮುಂಡಾಜೆ: ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನೂತನ ಮನೆ ಹಸ್ತಾಂತರ !

ಮುಂಡಾಜೆ: ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನೂತನ ಮನೆ ಹಸ್ತಾಂತರ !

- Advertisement -
- Advertisement -

ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಯ್ಯಾಲಿಯಲ್ಲಿ ಜಗನ್ನಾಥ ಶೆಟ್ಟಿ ಹಾಗೂ ಯಮುನಾ ದಂಪತಿಗಳು ಜೋಪಡಿಯಲ್ಲಿ ವಾಸವಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರು.

ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಸ್ಥಳೀಯರ ಸಹಕಾರದಿಂದ, ಶ್ರಮದಾನದ ಮೂಲಕ ಮನೆ ನಿರ್ಮಾಣವಾಯಿತು. ಮನೆ ಹಸ್ತಾಂತರವೂ ಆಯಿತು.

ಶಾಸಕ ಹರೀಶ್ ಪೂಂಜ, ವೀರಕೇಸರಿ ಬೆಳ್ತಂಗಡಿ, ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಡಾಜೆ, ಮೂರ್ತಿಲ್ಲಾಯಿ ಭಕ್ತವೃಂದ, ಮುಂಡಾಜೆ ಗ್ರಾಪಂ, ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ ಹಲವು ದಾನಿಗಳ ಸಹಕಾರದಲ್ಲಿ ರೂ. 2 ಲಕ್ಷ ವೆಚ್ಚದಲ್ಲಿ ಈ ಮನೆ ನಿರ್ಮಾಣಗೊಂಡಿದೆ. ಈ ಮನೆಯನ್ನು ಶಾಸಕ ಹರೀಶ್ ಪೂಂಜರವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

- Advertisement -

Latest News

error: Content is protected !!