Friday, June 5, 2026
Homeಕರಾವಳಿಕೋಟೇಶ್ವರದಲ್ಲಿ ಹಳದಿ ಮಳೆನೀರು ಸುರಿದಿದೆ !

ಕೋಟೇಶ್ವರದಲ್ಲಿ ಹಳದಿ ಮಳೆನೀರು ಸುರಿದಿದೆ !

- Advertisement -
- Advertisement -

ಕೋಟೇಶ್ವರ: ಇಲ್ಲಿನ ಕಡಲ ತೀರದ ನಿವಾಸಿ ಓರ್ವರ ಮನೆಯ ಮೇಲೆ ಹಳದಿ ಮಿಶ್ರಿತ ಬಣ್ಣದ ಮಳೆಯ ಹನಿ ಸುರಿದಿದೆ. ಈ ದೃಶ್ಯ ಎಲ್ಲರಿಗೆ ಆಶ್ಚರ್ಯ ಉಂಟುಮಾಡಿದೆ. ಇದರ ಜೊತೆ ಜೊತೆಗೆ ಆತಂಕವೂ ಮನೆಮಾಡಿದೆ.

ಇಲ್ಲಿನ ನಿವಾಸಿ ಪುಂಡಲೀಕ ಬಂಗೇರ ಅವರ ಮನೆಯ ಸ್ಲ್ಯಾಬ್ ಹಾಗೂ ಒಣಗಿಸಲು ಹಾಕಿರುವ ಬಟ್ಟೆ ಸಹಿತ ಗಿಡಮರಗಳ ಎಲೆಯಮೇಲೆ ಹಳದಿ ಮಿಶ್ರಿತ ಮಳೆ ನೀರು ಬಿದ್ದಿದೆ. ಹಾಗೇ ಮನೆಯವರು ಬಟ್ಟೆ ಒಣಗಿಸಲು ಹಾಕಿದ್ರು. ಬಿಳಿ ಬಟ್ಟೆಯ ಮೇಲೆ ಹಳದಿ ಮಳೆ ನೀರು ಬಿದ್ದಿದು ಸ್ವಚ್ಚಗೊಳಿಸಿದರೂ ಹೋಗುತ್ತಿಲ್ಲ. ಇದು ಇನ್ನಷ್ಟು ಆತಂಕ ತಂದಿಟ್ಟಿದೆ. ಮಳೆ ನೀರು ಸುಮಾರು 100 ಮೀ.ವ್ಯಾಪ್ತಿಯವರೆಗೆ ಪಸರಿಸಿದೆ.

ಈ ಹಿಂದೆ ಒಮ್ಮೆ ಅಮಾವಾಸ್ಯೆಬೈಲು ಪರಿಸರದಲ್ಲೂ ಈ ರೀತಿ ಹಳದಿ ಮಳೆ ನೀರು ಬಿದ್ದಿತ್ತು. ವಾತಾವರಣದಲ್ಲಿ ರಾಸಾಯನಿಕ ವಸ್ತು ಮಿಶ್ರಣಗೊಂಡು ಈ ರೀತಿಯ ಮಳೆ ಹನಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.

- Advertisement -

Latest News

error: Content is protected !!