- Advertisement -
- Advertisement -
ಬೆಳ್ತಂಗಡಿ: ದೇಶಾದ್ಯಂತ ಹಬ್ಬಿದ ಮಾರಕ ರೋಗ ಕೊರೊನಾ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕ ಸಂಘದ 38 ಸದಸ್ಯರಿಗೆ ಶಾಸಕ ಹರೀಶ್ ಪೂಂಜ ತಮ್ಮ ವೈಯಕ್ತಿಕ ಹಣದಿಂದ ಗುರುವಾಯನಕೆರೆ ಛಾಯಭವನದಲ್ಲಿ ಇಂದು ಆಹಾರ ಕಿಟ್ ವಿತರಿಸಿದರು.
ಇದೇ ವೇಳೆ ಇಬ್ಬರು ಸಂಘದ ಸದಸ್ಯರಿಗೆ ಶಾಸಕರು ತಲಾ 5 ಸಾವಿರ ರೂ. ಹಾಗೂ ಸಂಘದ ವತಿಯಿಂದ ನೀಡಿದ ತಲಾ 5 ಸಾವಿರ ಧನ ಸಹಾಯವನ್ನು ವಿತರಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಸುರೇಶ್ ಬಿ.ಕೌಡಂಗೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ.ಸುವರ್ಣ, ಗೌರವಾಧ್ಯಕ್ಷ ಎನ್.ಎ.ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಽಕಾರಿ ಪ್ರಭಾಕರ ಕಕ್ಕಿಂಜೆ ಹಾಗೂ ಗೌರವ ಸಲಹೆಗಾರರು, ಪಧಾದಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
- Advertisement -
