ಮಂಗಳೂರು: ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಕಿಡಿಕಾರಿದ್ದಾರೆ.
ತಮ್ಮ ವಿರುದ್ಧದ ಹೇಳಿಕೆಗೆ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಕೆಂಡಾಮಂಡಲರಾಗಿದ್ದಾರೆ. ತಮ್ಮ ಕಾರ್ಯವೈಖರಿ ಬಗ್ಗೆ ಮಾಡಿದ್ದಕ್ಕೆ ಆಕ್ರೋಶಗೊಂಡ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಾಯಿ ಕಳ್ಳ ಬಂದ್ರು ಬೊಗಳುತ್ತೆ, ಒಳ್ಳೆಯವರು ಬಂದ್ರು ಬೊಗಳುತ್ತದೆ. ನಾಯಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವರೆಂದು ಗೊತ್ತಾಗಲ್ಲ.
ಛಲವಾದಿಯು ನಾಯಿಯ ರೀತಿ ಯಾವುದು ಏನು ಅಂತಾ ಗೊತ್ತಾಗಲ್ಲ ಪಾಪ. ಬೊಗಳಿದೆ ಆದ್ರೆ ನಾವು ಅದಕ್ಕೆ ಕಲ್ಲು ಬಿಸಾಕೋದಕ್ಕೆ ಹೋಗಲ್ಲ ಅದು ಪ್ರಾಣಿ ಅಲ್ವಾ. ಯಾಕೆ ಅವರನ್ನು ಛಲವಾದಿ ನಾರಾಯಣ ಸ್ವಾಮಿ ಅಂತಾ ಕರೆಯೋದು.ಅವನಿಗೆ ಛಲವಾದಿ ನಾಲಾಯಕ್ ಸ್ವಾಮಿ ಅಂತಾ ಕರೆಯಬೇಕು ಪಾಪ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೇಲ್ಗಡೆಯಿಂದ ಬಂದು ಏನೇನು ಬೊಗಳಿ ಹೋಗ್ತಾರೆ. ಇಂತವರನ್ನು ಬಿಜೆಪಿಯವರು ಕರೆಸಿ ನಮ್ಮ ಪ್ರೀತಿಯನ್ನು ಯಾಕೆ ಹಾಳು ಮಾಡಿಕೊಳ್ತೀರಾ.?ಬಿಜೆಪಿ ಕಾಂಗ್ರೆಸ್ ಅಂತಾ ನಾವು ಇಲ್ಲಿ ಪ್ರೀತಿಯಲ್ಲಿ ಇದ್ದೇವೆ. ಇಂತವರಿಂದ ಬೊಗಳಿಸಿ ನಮ್ಮನ್ನು ಯಾಕೆ ಹಾಳು ಮಾಡಿಕೊಳ್ತೀರಾ. ಅವರು ನನ್ನ ವೇದಿಕೆಗೆ ಬರಲಿ,ಜನರ ವೇದಿಕೆಗೆ ಬರಲಿ ನಾನು ಉತ್ತರ ಕೊಡುತ್ತೇನೆ. ಅವರನ್ನು ಬೈಸೋದಕ್ಕೆ ಕರ್ದಿದ್ದಾರಾ ಅಂತಾ ಗೊತ್ತಿಲ್ಲ. ನಮ್ಮ ತಂಟೆಗೆ ಬಂದ್ರೆ ನಾವು ಉತ್ತರ ಕೊಡ್ತೇವೆ ಬೇರೆಯವರ ತಂಟೆಗೆ ನಾವು ಹೋಗಲ್ಲ ಎಂದಿದ್ದಾರೆ.


