Saturday, October 17, 2026
Homeಅಪರಾಧಫಲ್ಗುಣಿ ನದಿ ಸೇತುವೆಯ ಹತ್ತಿರ ಬೈಕ್ ನಿಲ್ಲಿಸಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಫಲ್ಗುಣಿ ನದಿ ಸೇತುವೆಯ ಹತ್ತಿರ ಬೈಕ್ ನಿಲ್ಲಿಸಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಬಜ್ಪೆ: ಯುವಕನೋರ್ವ ಫಲ್ಗುಣಿ ನದಿ ಸೇತುವೆಯ ಹತ್ತಿರ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದು, ಇದೀಗ ಯುವಕನ ಮೃತದೇಹ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದ ಯುವಕ ಚೇತನ್ (28). ಈತನು ಗುರುಪುರ ಫಲ್ಗುಣಿ ನದಿ ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿದ ಯುವಕ ನಾಪತ್ತೆಯಾಗಿದ್ದನು.

ಸ್ಥಳೀಯರು ಈತನು ಬೈಕ್ ಅನ್ನು ನಿನ್ನೆ ಸಂಜೆ ವೇಳೆಯಲ್ಲಿ ಸೇತುವೆ ಮೇಲೆ ನಿಲ್ಲಿಸಿದನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯಂತೆ ಬಜಪೆ ಠಾಣಾ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸಿದ್ದು, ಇದೀಗ ಚೇತನ್ ಮೃತದೇಹ ಫಾಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುವುದು ತಿಳಿದು ಬಂದಿಲ್ಲ.

- Advertisement -

Latest News

error: Content is protected !!