Thursday, May 9, 2024
Homeಕರಾವಳಿಬೆಳ್ತಂಗಡಿ : ಬೇರೆ ಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿ; ಧರ್ಮಸ್ಥಳ ಪೊಲೀಸರಿಂದ ಐದು...

ಬೆಳ್ತಂಗಡಿ : ಬೇರೆ ಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿ; ಧರ್ಮಸ್ಥಳ ಪೊಲೀಸರಿಂದ ಐದು ಜನರ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ನಿಗೂಢ‌ ಕಾರ್ಯ ಸಾಧನೆ ಮಾಡಲು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ:* ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಐದು ಜನ ಅಪರಿಚಿತ ಯುವಕರು ವ್ಯವಹಾರಕ್ಕೆಂದು ಹೇಳಿ ಅಧಿಕ ಪ್ರಮಾಣದ ಸಿಮ್ ಕಾರ್ಡ್ ಖರೀದಿ ಮಾಡಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಎಎಸ್ಐ ಸ್ಯಾಮುವೆಲ್ ಅವರು ಮತ್ತು ಸಿಬ್ಬಂದಿ ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯುವಕರಿಗಾಗಿ ಹುಡುಕಾಟ ನಡೆಸಿದಾಗ ಐದು ಮಂದಿ ಗುಂಪು ಸೇರಿಕೊಂಡಿದ್ದಾಗ ಯುವಕರನ್ನು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಯುವಕರ ಬ್ಯಾಗ್ ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್ ಕಾರ್ಡ್ ಮತ್ತು ಅವರ ಬಳಿ ಇದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.

ಐದು ಜನ ಬಂಧಿತ ಆರೋಪಿಗಳ ವಿವರ:ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಫೀಕ್ ಮಗ ರಮೀಝ್(20) , ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವಕಲ್ಲು ನಿವಾಸಿ ಇಬ್ರಾಹಿಂ ಮಗ ಅಕ್ಬರ್ ಆಲಿ(24), ಬೆಳ್ತಂಗಡಿ ನಗರದ ಸಂಜಯನಗರ ನಿವಾಸಿ ಹಸನಬ್ಬ ಮಗ ಮೊಹಮ್ಮದ್ ಮುಸ್ತಫಾ(22) , ಬೆಳ್ತಂಗಡಿ ತಾಲೂಕಿನ ಪಡಂಗಡಿ ಬದ್ರಿಯಾ ಮನ್ಝೀಲ್ ನಿವಾಸಿ ಇಸ್ಮಾಯಿಲ್ ಮಗ ಮಹಮ್ಮದ್ ಸಾಧಿಕ್(27) ಮತ್ತು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ (17) ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ನಿಗೂಢ ಕಾರ್ಯ ಸಾಧನೆಗೆ ಸಿಮ್ ಖರೀದಿ:
ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೋಸ ವಂಚನೆ ಮಾಡುವ ಅಥವಾ ಯಾವುದೋ ನಿಗೂಢ ಕಾರ್ಯ ಸಾಧನೆ ಬಳಸಲು ತಮ್ಮ ಗ್ಯಾಂಗ್ ಸದಸ್ಯರು ಸೇರಿಕೊಂಡು ಬಡ ವರ್ಗದ ಜನರನ್ನು ಟಾರ್ಗೆಟ್ ಮಾಡಿ ಅವರಿಗೆ ಸುಳ್ಳು ಹೇಳಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್ ಖರೀದಿ ಮಾಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಯಾವುದೋ ವ್ಯವಹಾರ ನಡೆಸುತ್ತಾರೆ ಎನ್ನಲಾಗಿದೆ.ಆರೋಪಿಗಳು ಈ ಹಿಂದೆಯೂ ಕೂಡ ಸಿಮ್ ಕಾರ್ಡ್ ದಂಧೆ ವ್ಯವಹಾರ ನಡೆಸುತ್ತಿದ್ದು. ಇನ್ನೂ ಈ ಪ್ರಕರಣದ ಹಿಂದೆ ಹಲವು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಧರ್ಮಸ್ಥಳ ಪೊಲೀಸ್ ಠಾಣೆಯ ಎಎಸ್ಐ ಸ್ಯಾಮುವೆಲ್ ಅವರು ನೀಡಿದ (ಸುಮೊಟೊ ಕೇಸ್)ದೂರಿನ ಮೇರೆಗೆ ಐದು ಜನ ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐಪಿಸಿ 1860(U/s-420,120B ಜೊತೆಗೆ 34)( ವಂಚನೆ, ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಇಷ್ಟು ಮಟ್ಟದಲ್ಲಿ ವಿವಿಧ ವ್ಯಕ್ತಿಗಳಿಂದ ಸಿಮ್ ಕಾರ್ಡ್ ಖರೀದಿಸಿ ಯಾರಿಗೆ ರವಾನೆಯಾಗುತ್ತಿತ್ತು ಮತ್ತು ಯಾಕೆ ಬಳಕೆ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಇನ್ನೂ ಸರಿಯಾಗಿ ದೃಢವಾಗಿಲ್ಲ ಅದ್ದರಿಂದ ಈ ಪ್ರಕರಣದ ತನಿಖೆ ಧರ್ಮಸ್ಥಳ ಪೊಲೀಸರು ಚುರುಕುಗೊಳಿಸಿದ್ದು ಇದರ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಾಲ್ಕು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ:

ಪ್ರಕರಣದಲ್ಲಿ ಬಂಧನವಾಗಿರುವ ಐದು ಜನ ಆರೋಪಿಗಳಲ್ಲಿ ನಾಲ್ಕು ಜನರನ್ನು ಫೆ.2 ರಂದು ಸಂಜೆ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ನ್ಯಾಯಾಲಯ ನಾಲ್ಕು ಜನರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಆರೋಪಿ ಅಪ್ರಾಪ್ತ ಬಾಲಕನಾಗಿರುವ ಕಾರಣದಿಂದ ಬಾಲಕನ ತಂದೆಯನ್ನು ಕರೆಸಿ ಬಾಲ ನ್ಯಾಯಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ತಂದೆಯ ಜೊತೆ ಮನೆಗೆ ಕಳುಹಿಸಿದ್ದಾರೆ.

ಆರೋಪಿಗಳು ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿಯೂ ಭಾಗಿ ಶಂಕೆ.?: 

ಆರೋಪಿಗಳು ಸಿಮ್ ಕಾರ್ಡ್ ಸಂಗ್ರಹದ ಮಾಡಿ ಬೇರೆಡೆ ಕಳುಹಿಸಿಕೊಡುವ ದಂಧೆಯ ಜೊತೆಗೆ ವಿದೇಶಿ ಕರೆನ್ಸಿ ದಂಧೆಯಲ್ಲೂ ತೊಡಗಿದ್ದಾರೆ ಎನ್ನಲಾಗಿದೆ. ವಿದೇಶಿ  ಕರೆನ್ಸಿಯನ್ನು ಅನ್ ಲೈನ್ ಮೂಲಕ ವಿದೇಶಿ ಪರಿಚಯದ ಮಧ್ಯವರ್ತಿಗಳ ಮೂಲಕ ಭಾರತದ ಕರೆನ್ಸಿಯಾಗಿ ಪರಿವರ್ತಿಸಿ ತಮ್ಮ ಗ್ಯಾಂಗ್ ಸದಸ್ಯರ ಮೂಲಕ ಬಡವರ ಬ್ಯಾಂಕ್ ಖಾತೆ ಸಂಗ್ರಹಿಸಿ ಹಣ ವರ್ಗಾವಣೆ ಮಾಡಿಸಿ ನಂತರ ಬ್ಯಾಂಕ್ ಖಾತೆಧಾರನಿಗೆ ಕಮಿಷನ್ ನೀಡಿ ಬ್ಯಾಂಕ್ ಹೋಗಿ ಹಣ ತೆಗೆಯುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ‌. ಈ ವಿದೇಶಿ ಕರೆನ್ಸಿ ದಂಧೆಯ ಪ್ರಮುಖ ರೂವಾರಿ ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ನಿವಾಸಿ ಅಕ್ಬರ್ ಆಲಿ(24) ಎನ್ನಲಾಗಿದೆ. ಈ ಆರೋಪಿಗಳ ದಂಧೆಯ ಹಿನ್ನಲೆ ಮಾತ್ರ ನಿಗೂಢವಾಗಿದೆ. ಪೊಲೀಸರು ಸರಿಯಾದ ತನಿಖೆ ನಡೆಸಿದ್ರೆ ಇನ್ನೂ ಹಲವು ಆರೋಪಿಗಳು ಬಂಧನವಾಗಲಿದೆ ಅದಲ್ಲದೆ ನೈಜ ದಂಧೆಗಳ ನಿಗೂಢ ಸ್ಫೋಟಕ ವಿಚಾರಗಳು ಹೊರಬರಲಿದೆ.

- Advertisement -
spot_img

Latest News

error: Content is protected !!