- Advertisement -
![]()
- Advertisement -
ಕಡಬ; ಮದುವೆ ಮನೆಯಲ್ಲಿ ನಾಪತ್ತೆಯಾದ ಮೊಬೈಲ್ ಒಂದು ಬಾರ್ ನಲ್ಲಿ ಪತ್ತೆಯಾದ ಘಟನೆ ಕಾಣಿಯೂರಿನಲ್ಲಿ ನಡೆದಿದೆ.
ಮೂರು ದಿನ ಹಿಂದೆ ಯುವಕನೊಬ್ಬನ ಮೊಬೈಲ್ ಮದುವೆ ಮನೆಯಲ್ಲಿ ಮಧ್ಯರಾತ್ರಿ ಕಳವಾಗಿತ್ತು. ಈ ಬಗ್ಗೆ ಯುವಕ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಡಬ ಪೊಲೀಸರ ಕಾರ್ಯಾಚರಣೆಯಿಂದಾಗಿ ಮೂರು ದಿನಗಳ ಬಳಿಕ ಕಾಣಿಯೂರಿನ ಬಾರೊಂದರ ಬಳಿ ಪತ್ತೆಯಾಗಿದೆ.
ಎರಡು ದಿನ ಪೋನ್ ಸ್ವಿಚ್ ಆಪ್ ಬರುತ್ತಿದ್ದು,ಮರುದಿನ ಫೋನ್ ಆನ್ ಆಗಿರೋದು ಗೊತ್ತಾಗಿದೆ. ಈ ವೇಳೆ ಮೊಬೈಲ್ ಟವರ್ ಲೊಕೇಶನ್ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಕಾಣಿಯೂರಿನ ಬಾರ್ ಒಂದರ ಬಳಿ ಮೊಬೈಲ್ ಪತ್ತೆಯಾಗಿದೆ.
ಮೊಬೈಲ್ ಕದ್ದ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಿಸಿದರೂ ಸಮರ್ಪಕ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ. ಕಡಬ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
- Advertisement -


