Thursday, May 2, 2024
Homeಕರಾವಳಿಬೆಳ್ತಂಗಡಿಯ ಕನ್ಯಾಡಿಯಲ್ಲಿ ಅಕ್ಕನ ಗಂಡನೊಂದಿಗೆ ಯುವತಿ ಪರಾರಿಯಾದ ಪ್ರಕರಣ : ಮಂಗಳೂರಿನ ರಿಮಾಂಡ್ ಹೋಂ ಸೇರಿದ...

ಬೆಳ್ತಂಗಡಿಯ ಕನ್ಯಾಡಿಯಲ್ಲಿ ಅಕ್ಕನ ಗಂಡನೊಂದಿಗೆ ಯುವತಿ ಪರಾರಿಯಾದ ಪ್ರಕರಣ : ಮಂಗಳೂರಿನ ರಿಮಾಂಡ್ ಹೋಂ ಸೇರಿದ ಯುವತಿ

spot_img
- Advertisement -
- Advertisement -

ಬೆಳ್ತಂಗಡಿ : ಇಲ್ಲಿನ ಕನ್ಯಾಡಿಯಲ್ಲಿ  ಅಕ್ಕನ ಗಂಡನೊಂದಿಗೆ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೋಲಿಸರು ಕೊಡಗಿನಲ್ಲಿ ಮುಸ್ತಫಾ-ರೈಹಾನ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ.

ಬಳಿಕ ಬೆಳ್ತಂಗಡಿ ಪೋಲಿಸರು ಇಬ್ಬರನ್ನೂ ವಿಚಾರಣೆ ನಡೆಸಿದರೂ ಈಕೆ ಮುಸ್ತಫಾನನ್ನು ಬಿಟ್ಟು ಕೊಡಲಿಲ್ಲ. ತಾನು ತನ್ನ ಸ್ವಂತ ಇಚ್ಛೆಯಿಂದ ಆತನ ಜೊತೆಗೆ ಹೋಗಿದ್ದು , ನನಗೆ ಆತನೇ ಬೇಕು ‌. ಆತನೊಂದಿಗೆ ಹೋಗಲು ಸಾಧ್ಯವಾಗಲಿಲ್ಲದ್ದರೆ ನಾನು ರಿಮಾಂಡ್ ಹೋಂಗೆ ಹೋಗುತ್ತೇನೆ ಆದರೆ ತಂದೆ ತಾಯಿಯ ಜೊತೆಗೆ ಹೋಗಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ.

ಅಂತಿಮವಾಗಿ ಪೋಲಿಸರು ಬುಧವಾರ ಸಂಜೆ ರೈಹಾನಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆಗಲೂ ಅದೇ ರೀತಿ ಹೇಳಿಕೆ ನೀಡಿದ ಕಾರಣಕ್ಕಾಗಿ ಆಕೆಯನ್ನು ಮಂಗಳೂರಿನ ರಿಮಾಂಡ್ ಹೋಂಗೆ ಕಳುಹಿಸಿ ಆದೇಶಿಸಿದ್ದಾರೆ.

ಏನಿದು ಪ್ರಕರಣ?

ಕನ್ಯಾಡಿ ಗ್ರಾಮದ ದೆರ್ಲಾಕ್ಕಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಎಂಬವರ ಹಿರಿಯ ಮಗಳನ್ನು 9 ತಿಂಗಳ ಹಿಂದೆ ಸರಿಯಾದ ವಿಳಾಸವಿಲ್ಲದ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಮೊದಲಿಗೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ವಾಸವಾಗಿದ್ದ ಅವರು ಬಳಿಕ ಮೆಲ್ಕಾರ್ , ಕೋಣಾಜೆ ಬಳಿಕ ಗುರುಪುರ ಎಂಬಲ್ಲಿಗೆ ವಾಸ ಬದಲಿಸಿದ್ದರು.

ಮದುವೆಯಾದ ಒಂದೇ ತಿಂಗಳಲ್ಲಿ ತನ್ನ ಪತ್ನಿಯ ಸ್ವಂತ ತಂಗಿಯ ಜೊತೆಗೆ ಸಲುಗೆ ಸಾಧಿಸಿದ ಈ ಖತರ್ನಾಕ್ ಮುಸ್ತಫಾ ಆಕೆಯ ಜೊತೆಗೆ ಸಂಬಂಧ ಹೊಂದಿದಲ್ಲದೆ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ ನೀಡತೊಡಗಿದ. ಇದರಿಂದಾಗಿ ನೊಂದ ಪತ್ನಿ ತನ್ನ ಚಿನ್ನಾಭರಣದೊಂದಿಗೆ ತವರು ಮನೆಗೆ ಬಂದಿದ್ದಾಳೆ. ಅಕ್ಕನ ಕೈಯಲ್ಲಿರುವ ಚಿನ್ನಾಭರಣವನ್ನು ರಾತ್ರೋರಾತ್ರಿ ಕಳವುಗೈದ ತಂಗಿ ಅದನ್ನು ಬೆಳ್ತಂಗಡಿಯ ಖಾಸಗಿ ಫೈನಾನ್ಸ್ ಒಂದರಲ್ಲಿ ಇಟ್ಟು ಹಣವನ್ನು ಮುಸ್ತಫಾನ ಕೈಗೆ ನೀಡುತ್ತಾಳೆ. ಅದಾಗಿ ಒಂದು ವಾರಗಳಲ್ಲಿಯೇ ತನ್ನ ತಂದೆ ಬೀಡಿ ಕಾರ್ಮಿಕರಿಗೆ ಮಜೂರಿಗಾಗಿ ನೀಡಲು‌ ಶೇಖರಣೆ ಮಾಡಿದ 65 ಸಾವಿರ ರೂಪಾಯಿಗಳ ಜೊತೆಗೆ ತನ್ನ ಸ್ವಂತ ಅಕ್ಕನ ಗಂಡನ ಜೊತೆಗೆ ಪರಾರಿಯಾಗಿದ್ದಳು.

- Advertisement -
spot_img

Latest News

error: Content is protected !!