Wednesday, April 16, 2025
Homeಕರಾವಳಿಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಪ್ರಕರಣ ದಾಖಲು

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ನಗರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿದ್ದು, ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿನಿ ಸ್ಪೂರ್ತಿ(18) ಎಂದು ಗುರುತಿಸಲಾಗಿದೆ. 

ಪ್ರಕರಣದ ವಿವರ: ಸ್ಪೂರ್ತಿ ಪಿಜಿಯಿಂದ ಕಾಲೇಜಿಗೆ ಹೋಗಿ ಬಳಿಕ ಚಿಕ್ಕಮಗಳೂರಿನ ತನ್ನ ಮನೆಗೆ ಬರುವುದಾಗಿ  ನ.16ರಂದು ತನಗೆ ಕರೆ ಮಾಡಿದ್ದಳು. ಆದರೆ ರಾತ್ರಿ 11ಕ್ಕೆ ತಾನು ಆಕೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿತ್ತು. ಈ ನಿಟ್ಟಿನಲ್ಲಿ ನ.17ರಂದು ಮಂಗಳೂರಿಗೆ ಬಂದು ಪಿಜಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಸ್ಪೂರ್ತಿಯ ತಾಯಿ ಗಾಯತ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!