Thursday, June 25, 2026
Homeಅಪರಾಧಆನ್‌ಲೈನ್‌ ಆ್ಯಪ್‌ ನಂಬಿ ಲಕ್ಷಾಂತರ ರೂ ಪಂಗನಾಮ; ವಿಡಿಯೋಗೆ ಲೈಕ್‌ ನೀಡಿ ಲಕ್ಷ ಕಳೆದುಕೊಂಡ ವ್ಯಕ್ತಿ

ಆನ್‌ಲೈನ್‌ ಆ್ಯಪ್‌ ನಂಬಿ ಲಕ್ಷಾಂತರ ರೂ ಪಂಗನಾಮ; ವಿಡಿಯೋಗೆ ಲೈಕ್‌ ನೀಡಿ ಲಕ್ಷ ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ರಾಮನಗರ:  ಚನ್ನಪಟ್ಟಣದ ಇಬ್ಬರು ವ್ಯಕ್ತಿಗಳು ಆನ್‌ಲೈನ್‌ ಆ್ಯಪ್‌ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಆನ್‌ಲೈನ್‌ ಆ್ಯಪ್‌ ಇಂಡಿಯನ್‌ ಸಿಆರ್‌ಡಬ್ಲ್ಯುಡಿ ಡಾಟ್‌ ಕಾಂ. ಎಂಬ ಅಪ್ಲಿಕೇಷನ್‌ನಲ್ಲಿರುವ ವಿಡಿಯೋಗೆ ಲೈಕ್‌ ನೀಡಿ ಹಣ ಸಂಪಾದಿಸುವ ಪ್ರಕ್ರಿಯೆಯಿಂದ ಇಬ್ಬರು 13.97 ಲಕ್ಷ ರೂ. ಕಳೆದುಕೊಂಡಿರುವ ಪ್ರಸಂಗ ಇದೀಗ ಸಿಇಎನ್‌ ಠಾಣೆ ಮೆಟ್ಟಿಲೇರಿದೆ.

ಹಣ ಕಳೆದುಕೊಂಡಿರುವ ಬಗ್ಗೆ ಚನ್ನಪಟ್ಟಣ ನಗರದ ಶಾಂತಪ್ಪ ಬ್ಲಾಕ್‌ ನಿವಾಸಿ ಮಹದೇವ, ಚನ್ನಪಟ್ಟಣ ತಾಲೂಕಿನ ಹೊನ್ನಾಯ್ಕನಹಳ್ಳಿ ಗ್ರಾಮದ ಮೋಹನ್‌ ಎಂಬವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ: ಚನ್ನಪಟ್ಟಣ ನಗರದ ಶಾಂತಪ್ಪ ಬ್ಲಾಕ್‌ ನಿವಾಸಿ ಆಗಿರುವ ಮಹದೇವ್‌ ಎಂಬವರು 9.21 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅವರು ಹೋಟೆಲ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೊಬೈಲ್‌ನಲ್ಲಿ ಬಂದ ಮೆಸೇಜ್‌ ನೋಡಿ ಆನ್‌ಲೈನ್‌ನಲ್ಲಿ ಹಣ ಗಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮೊದಲು ಇವರಿಗೆ ಕೆಲ ಯೂಟ್ಯೂಬ್‌ ವಿಡಿಯೋಗಳಿಗೆ ಲೈಕ್‌ ಮಾಡುವಂತೆ ತಿಳಿಸಿದ್ದಾರೆ. ಮೊದಲು ವಿಡಿಯೋ ಒಂದಕ್ಕೆ 45 ರೂ.ನಂತೆ ವಾರಕ್ಕೆ 20 ವಿಡಿಯೋ ಲೈಕ್‌ ಮಾಡಲು ಹೇಳಿ 900 ರೂ. ಹಣವನ್ನು ಇವರ ಬ್ಯಾಂಕ್‌ ಖಾತೆಗೆ ವಂಚಕರು ಜಮೆ ಮಾಡಿದ್ದಾರೆ. ಹೀಗೆ ಒಂದು ತಿಂಗಳು ಜಮೆ ಮಾಡಿದ ಬಳಿಕ, ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಹಂತ ಹಂತವಾಗಿ 9.21 ಲಕ್ಷ ರೂ. ಹಣವನ್ನು ವಂಚಕರು ತಮ್ಮ ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ.

 ಬೆಂಗಳೂರಿನ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಗ್ರಾಮದ ಮೋಹನ್‌ ಈ  ಆ್ಯಪ್‌ ಕುರಿತಂತೆ ಇನ್ನೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ವ್ಯಕ್ತಿಗೆ ವಿಡಿಯೋಗೆ ಲೈಕ್‌ ಮಾಡುವಂತೆ ಹೇಳಿ ಮೊದಲು 3 ತಿಂಗಳು ನೀಡಿ, ಬಳಿಕ ಹೂಡಿಕೆ ಮಾಡುವಂತೆ ನಂಬಿಸಿ 4.76 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಹಾಕಿಸಿಕೊಂಡು ವಂಚಿಸಲಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಜಿಲ್ಲಾ ಸಿಇಎನ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!