Wednesday, October 14, 2026
Homeಕರಾವಳಿಬೆಳ್ತಂಗಡಿ : ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಕಿತಾಪತಿ; ಹುಚ್ಚಾಟಕ್ಕೆ ಮೈಮೇಲೆ ಹತ್ತಿಕೊಂಡ ಬೆಂಕಿ

ಬೆಳ್ತಂಗಡಿ : ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಕಿತಾಪತಿ; ಹುಚ್ಚಾಟಕ್ಕೆ ಮೈಮೇಲೆ ಹತ್ತಿಕೊಂಡ ಬೆಂಕಿ

- Advertisement -
- Advertisement -

ಬೆಳ್ತಂಗಡಿ : ಊರಿನ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಕಿತಾಪತಿಯಿಂದ ದೊಡ್ಡ ಅನಾಹುತವೊಂದು ನಡೆದಿದ್ದು‌. ಇದರಿಂದ ಯಾವುದೇ ಪ್ರಾಣಹಾನಿಯಾಗದೆ ದುರಂತ ತಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಕಿರಣ್ ಎಂಬಾತನ ಹುಟ್ಟುಹಬ್ಬ ನ.18 ರಂದು ಇತ್ತು. ರಾತ್ರಿ ಬರ್ತಡೇ ಆಚರಿಸಲು ಗೆಳೆಯರು ಕಿರಣ್ ಮನೆಯ ಪಕ್ಕದ ರಸ್ತೆ ಬಳಿಗೆ ಕೇಕ್ ಜೊತೆ ಸ್ಪ್ರೇ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದರು. ರಸ್ತೆಯಲ್ಲಿ ಸ್ಕೂಟರ್ ಸೀಟ್ ಮೇಲೆ ಕೇಕ್ ಇಟ್ಟು ಕಿರಣ್ ಕ್ಯಾಂಡಲ್ ಗೆ ಬೆಂಕಿ ಹಚ್ಚಿದಾಗ ಗೆಳೆಯರು ಸೇರಿ ಸ್ಪ್ರೇ ಹಾಗೂ ಇನ್ನಿತರ ಕೆಮಿಕಲ್ ಕಿರಣ್ ಮೇಲೆ ಹಾಕಿದ್ದಾರೆ. ಈ ವೇಳೆ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದೆ ಸಣ್ಣಪುಟ್ಟ ಗಾಯದೊಂದಿದೆ ಕಿರಣ್ ಪರಾಗಿದ್ದಾನೆ ಎನ್ನಲಾಗಿದೆ. ಘಟನೆಯ ವಿಡಿಯೋ ಗೆಳೆಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!