Friday, June 26, 2026
Homeಕರಾವಳಿಉಡುಪಿಕುಂದಾಪುರ: ತ್ರಾಸಿ ಬೀಚ್ ನಲ್ಲಿ ಬೋಟ್ ಪಲ್ಟಿಯಾಗಿ ನಾಪತ್ತೆಯಾಗಿದ್ದ ರೈಡರ್ ಮೃತದೇಹ ಪತ್ತೆ

ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಬೋಟ್ ಪಲ್ಟಿಯಾಗಿ ನಾಪತ್ತೆಯಾಗಿದ್ದ ರೈಡರ್ ಮೃತದೇಹ ಪತ್ತೆ

- Advertisement -
- Advertisement -

ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಬೋಟ್ ಪಲ್ಟಿಯಾಗಿ ನಾಪತ್ತೆಯಾಗಿದ್ದ ರೈಡರ್ ಮೃತದೇಹ ಪತ್ತೆಯಾಗಿದೆ. ಮೃತ ರೋಹಿದಾಸ್‌ (41) ಮೃತದೇಹ 36 ಗಂಟೆಗಳ ಬಳಿಕ ಪತ್ತೆಯಾಗಿದೆ.

ಶನಿವಾರ ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಬೋಟ್‌ ಮಗುಚಿ ರೋಹಿದಾಸ್ ಸಮುದ್ರಪಾಲಾಗಿದ್ದರು. ಈ ವೇಳೆ ಹುಡುಕಾಡಿದರೂ ರೋಹಿದಾಸ್ ದೇಹ ಪತ್ತೆಯಾಗಿರಲಿಲ್ಲ. ಘಟನೆ ನಡೆದು 36 ಗಂಟೆಗಳ ಬಳಿಕ ಸಮೀಪದ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಇಂದು(ಸೋಮವಾರ) ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳುತ್ತಿದ್ದ ವೇಳೆ ಶವ ತೇಲುತ್ತಿರುವುದನ್ನು ಗಮನಿಸಿ, ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿ ಗೆ ಮಾಹಿತಿ ನೀಡಿದ್ದಾರೆ, ಬಳಿಕ ಮೂವರು ಸೇರಿ ಸಮುದ್ರದಲ್ಲಿ ತೇಲುತ್ತಿದ್ದ ಶವವನ್ನು ಮೇಲೆಕ್ಕೆ ತಂದಿದ್ದಾರೆ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಶವವನ್ನು ಇಬ್ರಾಹಿಂ ಗಂಗೊಳ್ಳಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

- Advertisement -

Latest News

error: Content is protected !!