Saturday, May 18, 2024
Homeಕರಾವಳಿಮಂಗಳೂರು: ಯುವ ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗ್ತಿದಿಯಾ ಖಾಸಗಿ ಸ್ಲೀಪಿಂಗ್ ಕೋಚ್ ಬಸ್ ಗಳು? ಪದೇ...

ಮಂಗಳೂರು: ಯುವ ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗ್ತಿದಿಯಾ ಖಾಸಗಿ ಸ್ಲೀಪಿಂಗ್ ಕೋಚ್ ಬಸ್ ಗಳು? ಪದೇ ಪದೇ ಮರುಕಳಿಸುತ್ತಿದೆ ಆ ಘಟನೆಗಳು

spot_img
- Advertisement -
- Advertisement -

ಮಂಗಳೂರು; ಕರಾವಳಿಯಲ್ಲಿ ಬಸ್ ಗಳಲ್ಲಿ ಯುವ ಜೋಡಿಗಳು ಅನೈತಿಕ ಚಟುವಟಿಕೆಗಳ ಮೂಲಕ ಸಿಕ್ಕಿ ಬೀಳುವ ಪ್ರಕರಣ ಪದೇ ಪದೇ ಪುನಾರವರ್ತನೆ ಆಗ್ತಾನೆ ಇದೆ. ಇದು ಸಾರ್ವಜನಿಕರಲ್ಲಿ

ಖಾಸಗಿ ಸ್ಲೀಪಿಂಗ್ ಕೋಚ್ ಬಸ್ ಗಳು ಜೋಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗ್ತಿದ್ಯಾ ಅನ್ನೋ ಅನುಮಾನ ಹುಟ್ಟು ಹಾಕಿದೆ. ಅತ್ತ ಹೋಟೆಲ್ ಹಾಗೂ ಇತರ ಲಾಡ್ಜ್ ಗಳಲ್ಲಿ ರೂಮ್ ಮಾಡಿ ಜೋಡಿಗಳ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಖುಷಿ ಪಟ್ಟರೆ ಇತ್ತ ಐಷಾರಾಮಿ ಖಾಸಗಿ ಬಸ್ ಗಳಲ್ಲಿ ಜೋಡಿಗಳ ಪ್ರಯಾಣ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

ಲಾಡ್ಜ್ ಗಳಲ್ಲಿ ಜೋಡಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳ ವಿಚಾರಣೆ ಸಹಿತ ಸಂಘಟನೆಗಳ ದಾಳಿಗಳಿಗೆ ಹೆದರಿ ಈ ರೀತಿಯಲ್ಲಿ ಬಸ್ ಗಳನ್ನು ಉಪಯೋಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ಪ್ರಯಾಣ ಮಾಡುವ ವೇಳೆ ಜೋಡಿಗಳಿಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲ…ಗೌಪ್ಯತೆ ಗೆ ಹೆಚ್ಚು ಸಹಕಾರಿ ಆಗುತ್ತದೆ ಎನ್ನಲಾಗಿದೆ.ದೂರದ ಬೆಂಗಳೂರು ಸಹಿತ ಅನೇಕ ಊರುಗಳಿಗೆ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ಟಿಕೆಟ್ ಕಾದಿರಿಸುವ ಜೋಡಿಗಳು ಅದೇ ಬಸ್ ನಲ್ಲಿ ವಾಪಾಸು ಊರಿಗೆ ಬರುವಂತೆ ರಿಟರ್ನ್ ಟಿಕೆಟ್ ಕೂಡ ಮಾಡಲಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇಂತಹ ಚಟುವಟಿಕೆಗಳು ಮುಂದೊಂದು ದಿನ ಸಮಾಜದಲ್ಲಿ ಅಶಾಂತಿ ಹಬ್ಬಲು ಮೂಲಕಾರಣವಾಗಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿಬಂದಿದೆ.

ಡಿ.15 ರಂದು ಗುರುವಾರ ರಾತ್ರಿ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ ಒಂದರಲ್ಲಿ ಅನ್ಯಕೋಮಿನ ಜೋಡಿಗಳು ಪ್ರಯಾಣ ನಡೆಸಿ ಗೊಂದಲಕ್ಕೆ ಕಾರಣವಾದ ಬಳಿಕ ಸಾರ್ವಜನಿಕ ವಲಯದಲ್ಲಿ ಈ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಇಂತಹ ದಂಧೆಗಳು ಹೈಟೆಕ್ ಸ್ಲೀಪಿಂಗ್ ಕೋಚ್ ಬಸ್ ಗಳಲ್ಲಿ ನಡೆಯುವುದೇ ಆದರೆ ಪೋಲೀಸರು ಕ್ರಮ ಕೈಗೊಳ್ಳುವ ಅನಿವಾರ್ಯತೆ ಕೂಡ ಇದೆ.

- Advertisement -
spot_img

Latest News

error: Content is protected !!