Wednesday, June 3, 2026
Homeಅಪರಾಧದುಷ್ಕರ್ಮಿಗಳಿಂದ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ; ಬೈಕ್‌ಗಳು ಸುಟ್ಟು ಭಸ್ಮ

ದುಷ್ಕರ್ಮಿಗಳಿಂದ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ; ಬೈಕ್‌ಗಳು ಸುಟ್ಟು ಭಸ್ಮ

- Advertisement -
- Advertisement -

ಬೆಂಗಳೂರು ಚಾಮುಂಡಿನಗರ ಬಳಿಯಲ್ಲಿ ದ್ವೇಷದ‌ ಹಿನ್ನಲೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ವಿಜಯ್​ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳಿಗೆ ಕಿರಾತಕರು ತಡ‌ರಾತ್ರಿ ಬೆಂಕಿ ಹಚ್ಚಿದ್ದು, ಬಳಿಕ ಪರಾರಿಯಾಗಿದ್ದಾರೆ. ಬೆಂಕಿಗೆ ನಾಲ್ಕು ಬೈಕ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಯು ತಡರಾತ್ರಿ ನಡೆದಿದ್ದು, ಬೆಂಕಿ ಅವಘಡಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಹಚ್ಚಿ ಓಡಿದ್ದಾರೆ ಎನ್ನಲಾಗಿದ್ದು, ಬೆಂಕಿಯ ತೀವ್ರತೆಗೆ ಬೈಕ್ ಸೇರಿದಂತೆ ಮನೆಯ ಕಿಟಕಿ, ಗೋಡೆಗೂ ಸಹ ಬೆಂಕಿ ತಗುಲಿದೆ.

ರಾತ್ರಿ ಹೊತ್ತು ಘಟನೆ ಸಂಭವಿಸಿದ್ದರಿಂದ ಮನೆಯಲ್ಲಿ ವಿಜಯ್ ಕುಟುಂಬ ನಿದ್ರೆಗೆ ಜಾರಿತ್ತು. ಆದರೆ ಮನಯಲ್ಲಿ ಬೆಂಕಿ ಕಂಡ ಕೂಡಲೇ ಹೊರಗಡೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಕೂಡಲೇ ಕುಟುಂಬದವರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರು ಹಾಗೂ ಒಂದು ಬೈಕ್ ಅನ್ನು ತೆಗೆಯಲು ಸಹಕರಿಸಿದ್ದಾರೆ. ವಿಜಯ್​ ಮನೆಯ ಗೋಡೆಗೂ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಎರಡು ಪಕ್ಷಿಗಳು ಬೆಂಕಿಗೆ ಬಲಿಯಾಗಿವೆ. ಮನೆಯ ಕಿಟಕಿ ಹಾಗೂ ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ. ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!