Saturday, June 6, 2026
HomeUncategorizedಬೆಳ್ತಂಗಡಿ : ಕೊಕ್ಕಡದಲ್ಲಿ ಸರಕಾರಿ ಬಸ್ ನಲ್ಲಿ ಅನ್ಯಕೋಮಿನ ಅಪ್ರಾಪ್ತ ಜೋಡಿ ಪತ್ತೆ

ಬೆಳ್ತಂಗಡಿ : ಕೊಕ್ಕಡದಲ್ಲಿ ಸರಕಾರಿ ಬಸ್ ನಲ್ಲಿ ಅನ್ಯಕೋಮಿನ ಅಪ್ರಾಪ್ತ ಜೋಡಿ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಸರಕಾರಿ ಬಸ್ ನಲ್ಲಿ ಅನ್ಯಾಕೋಮಿನ ಇಬ್ಬರು ಅಪ್ರಾಪ್ತ ಜೋಡಿಯನ್ನು ಸೋಮವಾರ ರಾತ್ರಿ ಕೊಕ್ಕಡದಲ್ಲಿ ಬಸ್ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆಹಚ್ಚಿ ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬೆಂಗಳೂರು ಜಿಲ್ಲೆಯ ದೇವನಹಳ್ಳಿಯ ವ್ಯಾಪ್ತಿಯ ಅಪ್ರಾಪ್ತ ಒಂದೇ ಕಾಲೇಜಿನ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಬ್ಬರು(ಹಿಂದೂ ಬಾಲಕಿ ಮತ್ತು ಮುಸ್ಲಿಂ ಬಾಲಕ) ಸೋಮವಾರ ಸಂಜೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ರಾತ್ರಿ ವಾಪಸ್ ಬಸ್ ನಲ್ಲಿ ಹೋಗುತ್ತಿದ್ದರು ಈ ವೇಳೆ ಯಾರೋ ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು.

ಧರ್ಮಸ್ಥಳ ಪೊಲೀಸರು ಬೆಂಗಳೂರು ದೇವನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅಲ್ಲಿಂದ ಹೆತ್ತವರ ಜೊತೆ ಪೊಲೀಸರು ಕೂಡ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ.

- Advertisement -

Latest News

error: Content is protected !!