ಬಂಟ್ವಾಳ; ಅಪ್ರಾಪ್ತ ಬಾಲಕರಿಬ್ಬರು ಇಂಟರ್ ಲಾಕ್ ಘಟಕಕ್ಕೆ ಅಕ್ರಮವಾಗಿ ನುಗ್ಗಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪಾಲಾಸ್ತಡ್ಕ ಎಂಬಲ್ಲಿ ನಡೆದಿದೆ.
ಆನಂದಗೌಡ ಎಂಬವರು ಪಾಲಾಸ್ತಡ್ಕ ಎಂಬಲ್ಲಿ ಪತ್ನಿ ಹೆಸರಿನಲ್ಲಿ ಪಿ ಬಿ ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕವನ್ನು ನಡೆಸುತ್ತಿದ್ದಾರೆ. ಈ ಘಟಕಕ್ಕೆ ಸಿಸಿ ಕ್ಯಾಮಾರವನ್ನು ಅಳವಡಿಸಿರುತ್ತಾರೆ. ದಿನಾಂಕ:28-09-2025 ರಂದು ಬೆಳಿಗ್ಗೆ 11.00 ಗಂಟೆಗೆ ಆನಂದಗೌಡ ಅವರು ಇಂಟರ್ ಲಾಕ್ ಘಟಕವನ್ನು ಪರೀಶಿಲಿಸಿದ ನಂತರ 6.00 ಗಂಟೆಗೆ ಇಂಟರ್ ಲಾಕ್ ಘಟಕಕ್ಕೆ ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶ ಮಾಡಿ ಅಳವಡಿಸಿದ್ದ 2 ಸಿಸಿ ಕ್ಯಾಮಾರಗಳನ್ನು, ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮಾರದ ಡಿವಿಆರ್ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿದಿದೆ. ಈ ಬಗ್ಗೆ ಅವರುನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವಿಆರ್ ಸುಟ್ಟುಹೋಗಿದ್ದರೂ ಮಾಲೀಕರ ಮೊಬೈಲ್‌ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಆರೋಪಿಗಳನ್ನು ಪತ್ತೆ ಹಚ್ಚೋದು ಪೊಲೀಸರಿಗೆ ಸುಲಭವಾಗಿದ್ದು ಕೃತ್ಯವೆಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಪೋಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಇದೀಗ ಇವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


