Wednesday, June 24, 2026
Homeತಾಜಾ ಸುದ್ದಿಪಾಕ್ ವಿರುದ್ಧ ಯುದ್ಧ ಮಾಲು ನಾನು ಸಿದ್ಧ ಎಂದ ಸಚಿವ ಜಮೀರ್ ಅಹ್ಮದ್

ಪಾಕ್ ವಿರುದ್ಧ ಯುದ್ಧ ಮಾಲು ನಾನು ಸಿದ್ಧ ಎಂದ ಸಚಿವ ಜಮೀರ್ ಅಹ್ಮದ್

- Advertisement -
- Advertisement -

ಬೆಂಗಳೂರು; ಪಾಕ್ ವಿರುದ್ಧ ಯುದ್ಧ ಮಾಲು ನಾನು ಸಿದ್ಧ ಎಂದ ಸಚಿವ ಜಮೀರ್ ಅಹ್ಮದ್ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ನೀಡಿದರೆ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದಕ್ಕೆ ನಾನೇ ಹೋಗುತ್ತೇನೆ ಎಂದು  ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಶುಕ್ರವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯರು, ನಾವು ಹಿಂದೂಸ್ಥಾನಿಯರು. ನಮಗೂ ಹಾಗೂ ಪಾಕಿಸ್ತಾನಕ್ಕೂ ಯಾವ ಸಂಬಂಧವೂ ಇಲ್ಲ. ಯುದ್ಧ ಮಾಡಲು ನಾನು ಸಿದ್ದ. ಮಂತ್ರಿಯಾಗಿರುವ ನನ್ನನ್ನು ಯುದ್ಧಕ್ಕೆ ಕಳುಹಿಸುತ್ತಾರೆ ಎಂದರೆ, ಹೋಗಲು ನಾನು ಸಿದ್ದ. ನಾನೇ ಹೋಗುತ್ತೇನೆ ಯುದ್ಧ ಮಾಡುವುದಕ್ಕೆ. ನಡೀರಿ ಎಲ್ಲ ಹೋಗೋಣ’ ಎಂದು ಅಲ್ಲಿದ್ದ ಎಲ್ಲರಿಗೂ ಹೇಳಿದರು.


ಮಾತು ಮುಂದುವರಿಸಿದ ಜಮೀರ್, ‘ಸೂಸೈಡ್ ಬ್ಯಾಗ್ ಹಾಕಲು ನಾನು ಸಿದ್ದ. ನಾನು ತಮಾಷೆಗೆ, ಸುಮ್ಮನೆ ಜೋಶ್ ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ, ನನ್ನ ಅಗತ್ಯ ಇದ್ದರೆ ಸೂಸೈಡ್ ಬ್ಯಾಗ್ ಅನ್ನು ಅಮಿತ್ ಶಾ, ನರೇಂದ್ರ ಮೋದಿ ಅವರು ನನಗೆ ಕೊಡಲಿ. ದೇವರ ಮೇಲಾಣೆ ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಹೇಳಿದರು.

- Advertisement -

Latest News

error: Content is protected !!