Sunday, June 7, 2026
Homeಉತ್ತರ ಕನ್ನಡಕುಮರಿ ಮರಾಠ ಜನಾಂಗ ಎಸ್ ಟಿ ಗೆ ಸೇರಿಸಲು ಕುಲ ಶಾಸ್ತ್ರೀಯ ಅಧ್ಯಯನ: ವಿಧಾನಸಭೆಯಲ್ಲಿ ಸಚಿವ...

ಕುಮರಿ ಮರಾಠ ಜನಾಂಗ ಎಸ್ ಟಿ ಗೆ ಸೇರಿಸಲು ಕುಲ ಶಾಸ್ತ್ರೀಯ ಅಧ್ಯಯನ: ವಿಧಾನಸಭೆಯಲ್ಲಿ ಸಚಿವ ಶ್ರೀರಾಮುಲು ಭರವಸೆ

- Advertisement -
- Advertisement -

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕುಮರಿ ಮರಾಠ ಜನಾಂಗದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ.

ಗಮನ ಸೆಳೆಯುವ ಸೂಚನೆ ಮೂಲಕ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಎಸ್ ಟಿ ಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.

ಶಾಸಕ ಸುನೀಲ್ ನಾಯ್ಕ್ ಪ್ರಸ್ತಾಪಕ್ಕೆ ಉತ್ತರಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು, ಕುಮರಿ‌ ಮರಾಠ ಜನಾಂಗವನ್ನು ಎಸ್ ಟಿ ಗೆ ಸೇರಿಸುವ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ ಆಗಬೇಕಾಗಿದೆ. ಹೀಗಾಗಿ ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!