Saturday, June 13, 2026
Homeತಾಜಾ ಸುದ್ದಿಕಲ್ಲು ಬಂಡೆ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ನಾರಾಯಣಗೌಡ

ಕಲ್ಲು ಬಂಡೆ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ನಾರಾಯಣಗೌಡ

- Advertisement -
- Advertisement -

ಮಂಡ್ಯ: ಕೂದಲೆಳೆ ಅಂತರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭಾರೀ ಅಪಾಯದಿಂದ ಪಾರಾಗಿದ್ದಾರೆ. ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟಗೊಳಿಸಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ.

ರಸ್ತೆ ಕಾಮಗಾರಿ ವೇಳೆ ಹಿನ್ನೆಲೆ ಹಗಲಿನಲ್ಲೇ ಕಲ್ಲು ಬಂಡೆ ಸಿಡಿಸಲಾಗಿದೆ. ಅಷ್ಟೇ ಅಲ್ಲದೆ ಸ್ಫೋಟಕ್ಕೂ ಮುನ್ನ ರಸ್ತೆ ಸಂಚಾರ ಬಂದ್ ಮಾಡಿಸಿಲ್ಲ. ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬಂಡೆಯನ್ನು ಸ್ಫೋಟಿಸಿ ಬೇಜವಾಬ್ದಾರಿ ತೋರಿದ ಗುತ್ತಿಗೆದಾರನ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಕೋಪಗೊಂಡಿದ್ದ ಸಚಿವರ ನಾರಾಯಣಗೌಡ ಅವರು, ತಕ್ಷಣವೇ ಗುತ್ತಿಗೆದಾರ ಮೈಸೂರಿನ ಶ್ರೀನಿವಾಸ್ ರಾಜ್ ಅವರನ್ನು ವಶಕ್ಕೆ ಪಡೆಯುವಂತೆ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಪೊಲೀಸರು ಶ್ರೀನಿವಾಸ್ ರಾಜ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!