Thursday, June 4, 2026
Homeಕರಾವಳಿಶಿರಾಡಿಯಲ್ಲಿ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ; ಮೃತ ವ್ಯಕ್ತಿಯ ಮನೆಗೆ ಸಚಿವ ಅಂಗಾರ ಭೇಟಿ

ಶಿರಾಡಿಯಲ್ಲಿ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ; ಮೃತ ವ್ಯಕ್ತಿಯ ಮನೆಗೆ ಸಚಿವ ಅಂಗಾರ ಭೇಟಿ

- Advertisement -
- Advertisement -

ಶಿರಾಡಿ; ಆನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಶಿರಾಡಿ ಗ್ರಾಮದ ಜಮತಾ ಕಾಲನಿ ನಿವಾಸಿ ತಿಮ್ಮಪ್ಪ ಅವರ ಮನೆಗೆ  ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಇದೇ ವೇಳೆ  ಘಟನೆ ಬಗ್ಗೆ ಅರಣ್ಯ ಇಲಾಖೆಯ ಡಿಸಿಎಫ್ ಅವರನ್ನು ಸಂಪರ್ಕಿಸಿ ಇಲಾಖಾ ವತಿಯಿಂದ ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಶಿರಾಡಿ ಬಳಿ ಹೊಳೆಯಲ್ಲಿ ಮೀನು ಹಿಡಿಯಲು ಹೋದಾಗ ತಂದೆ ಮಗನ ಮೇಲೆ ಒಂಟಿ ಸಲಗ ಡಿ.31 ರಂದು ದಾಳಿ ಮಾಡಿತ್ತು.ಈ ಘಟನೆಯಲ್ಲಿ ಶಿರಾಡಿ ಗ್ರಾಮದ ಜಮತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ಮತ್ತು ಅವರ ಪುತ್ರ ಶರಣ್ ದಾಳಿಗೆ ಒಳಗಾಗಿದ್ದರು.ತಂದೆ ಸಾವಿಗೀಡಾದರೆ ಮಗ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

- Advertisement -

Latest News

error: Content is protected !!