Thursday, June 4, 2026
Homeಕರಾವಳಿಸುಳ್ಯ: ಉಪ್ಪುಕಳದಲ್ಲಿ‌ ಸೇತುವೆ ಕುಸಿತ ಪ್ರಕರಣ: ಘಟನಾ‌ಸ್ಥಳಕ್ಕೆ‌ ಸಚಿವ ಅಂಗಾರ ಭೇಟಿ

ಸುಳ್ಯ: ಉಪ್ಪುಕಳದಲ್ಲಿ‌ ಸೇತುವೆ ಕುಸಿತ ಪ್ರಕರಣ: ಘಟನಾ‌ಸ್ಥಳಕ್ಕೆ‌ ಸಚಿವ ಅಂಗಾರ ಭೇಟಿ

- Advertisement -
- Advertisement -

ಸುಳ್ಯ: ಇಲ್ಲಿನ‌ ಬಾಳುಗೋಡಿನ ಉಪ್ಪುಕಳ ಎಂಬಲ್ಲಿ ಮಳೆಯಿಂದ ಸೇತುವೆ ಕುಸಿದು ಬಿದ್ದ ಜಾಗಕ್ಕೆ ಸುಳ್ಯದ ಶಾಮಕರು ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಇಂದು(ಜು.14) ಭೇಟಿ ನೀಡಿದರು. ಈ ವೇಳೆ  ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಚಿವ ಅಂಗಾರ ಉಪ್ಪುಕಳದ ಸಮಸ್ಯೆಯನ್ನು ತೆರೆದಿಟ್ಟ ಮಾಧ್ಯಮಗಳ ಮೇಲೆ  ಗರಂ ಆದ್ರು. ಮಾಧ್ಯಮಗಳು ವರದಿ ಮಾಡಿದ ಮಾತ್ರಕ್ಕೆ ಸೇತುವೆ ರಚನೆಯಾಗುವುದಿಲ್ಲ. ಅದಕ್ಕೆ ಸಮಯಾವಕಾಶ ಬೇಕು. ಎಲ್ಲದಕ್ಕೂ ಟೀಕೆ ಮಾಡುವುದು ಸರಿಯಲ್ಲ, ನಾವು ಈಗಾಗಲೇ ಮಾಡಿರುವ ಕೆಲಸವನ್ನು ಕೂಡಾ ಹೇಳಬೇಕು ಎಂದು ವಾಗ್ದಾಳಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರ ವಿರುದ್ಧವೂ ಸಚಿವರು ಕೋಪಗೊಂಡರು.

- Advertisement -

Latest News

error: Content is protected !!