Wednesday, June 3, 2026
Homeಕರಾವಳಿಬೆಳ್ತಂಗಡಿ : ಬ್ರೇಕ್ ಫೈಲ್‌ ಆಗಿ ಅರಣ್ಯಕ್ಕೆ ನುಗ್ಗಿದ ಶಬರಿಮಲೆಗೆ ಹೋಗುತ್ತಿದ್ದ ಮಿನಿ ಬಸ್

ಬೆಳ್ತಂಗಡಿ : ಬ್ರೇಕ್ ಫೈಲ್‌ ಆಗಿ ಅರಣ್ಯಕ್ಕೆ ನುಗ್ಗಿದ ಶಬರಿಮಲೆಗೆ ಹೋಗುತ್ತಿದ್ದ ಮಿನಿ ಬಸ್

- Advertisement -
- Advertisement -

ಬೆಳ್ತಂಗಡಿ : ಶಬರಿಮಲೆಗೆ ಹೋಗುತ್ತಿದ್ದ ಮಿನಿ ಬಸ್ಸೊಂದು ಬ್ರೇಕ್ ಫೈಲ್ ಆಗಿ ಅರಣ್ಯಕ್ಕೆ ನುಗ್ಗಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಡೆದಿದೆ.

ಬಳ್ಳಾರಿಯ ಜಿಲ್ಲೆಯ ಕೂಡ್ಲಗಿ ತಾಲೂಕಿನ 21 ಜನರು ಮಿನಿ ಬಸ್ ನಲ್ಲಿ‌ ಚಾರ್ಮಾಡಿ ಘಾಟ್ ಮೂಲಕ ಶಬರಿಮಲೆಗೆ  ಪ್ರಯಾಣ ಮಾಡುವಾಗ ಇಂದು ಬೆಳಗ್ಗೆ ಬ್ರೇಕ್ ಫೈಲ್ ಆಗಿ ಅರಣ್ಯದತ್ತ ಚಲಿಸಿದೆ. ಪರಿಣಾಮ ಮಿನಿ ಬಸ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿಗೆ ಸಾಗಿಸಲಾಗಿದೆ. ಇಬ್ಬರನ್ನು ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 15 ಜನ ಕಕ್ಕಿಂಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆರು ಆಂಬುಲೆನ್ಸ್ ಅಗಮಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!