Thursday, June 25, 2026
Homeಕರಾವಳಿಚಿಕ್ಕಮಗಳೂರು: ಲಕ್ಷಗಟ್ಟಲೆ ಹಣ ವಂಚಿಸಿದ ಖದೀಮರು: 100/-ರ ನೋಟಿನ ಕೆಳಗೆ ಬಿಳಿ ಪೇಪರ್ ಇಟ್ಟ ಚಾಲಕಿಗಳು

ಚಿಕ್ಕಮಗಳೂರು: ಲಕ್ಷಗಟ್ಟಲೆ ಹಣ ವಂಚಿಸಿದ ಖದೀಮರು: 100/-ರ ನೋಟಿನ ಕೆಳಗೆ ಬಿಳಿ ಪೇಪರ್ ಇಟ್ಟ ಚಾಲಕಿಗಳು

- Advertisement -
- Advertisement -

ಕಡೂರು: ಕತಾರ್ ನಕ್ ಖದೀಮರ ಕಳ್ಳಾಟಕ್ಕೆ ಇಲ್ಲೊಬ್ಬರು ಮೋಸ ಹೋಗಿದ್ದಾರೆ. ದೇವಸ್ಥಾನದ ಹುಂಡಿಯ ರೂ. 100/- ಮುಖ ಬೆಲೆಯ ಲಕ್ಷಗಟ್ಟಲೆ ನೋಟುಗಳ ಬದಲಾಗಿ ರೂ. 2,000/- ಮತ್ತು 500/- ಮುಖ ಬೆಲೆಯ ನೋಟುಗಳನ್ನು ಕೊಟ್ಟಲ್ಲಿ ಲಕ್ಷಕ್ಕೆ 30% ರಂತೆ ಕೊಡುವುದಾಗಿ ನಂಬಿಸಿದ್ದಾರೆ.

ಅದರಂತ ಪಿರ್ಯಾದುದಾರರಿಗೆ ಪರಿಚಯವಿರುವ ಉಜಿರ ನಿವಾಸಿ ಶ್ರೀಮತಿ ಕೃಪಾ ಇವರಿಗೆ ವಿಚಾರ ತಿಳಿಸಿ ನಾರಾಯಣ ರೈ ರವರ ಮೊಬೈಲ್ ಗೆ ಕರೆ ಮಾಡಿದಾಗ ಇಲಿಯಾಜ್ ಎಂಬುವರ ಮೊಬೈಲ್ ನಂಬರ್ ಕೊಟ್ಟಿದ್ದು , ಇಲಿಯಾಜ್ ಎಂಬುವರಿಗೆ ಪೋನ್ ಮಾಡಿದಾಗ ಕಡೂರಿನ ಮಹೇಶ ಎಂಬುವರಿಗೆ ಭೇಟಿ ಮಾಡಿ ಮಾತನಾಡಲು ತಿಳಿಸಿದರು.

ಪಿರ್ಯಾದಿ ಮತ್ತು ಅವರ ಸ್ನೇಹಿತ ಜನಾರ್ಧನರವರು ಕಡೂರಿನ ಚಂದ್ರಮೌಳೇಶ್ವರ ದೇವಸ್ಥಾನದ ಹತ್ತಿರ ಬಂದು ನೋಡಿದಾಗ ಸ್ವಾಮೀಜಿ ಮಹೇಶ್ ಎಂಬುವರು ಖಾವಿ ಬಟ್ಟೆ ಧರಿಸಿದ್ದು , ಅವರೊಂದಿಗೆ ತುಮಕೂರಿನ ವಿನಯ್ ಕೂಡ ಇದ್ದರೂ.

ನೀವು 500 / – ರೂ ಹಾಗೂ 2000 / – ರೂ ಮುಖಬೆಲೆಯ ನೋಟುಗಳನ್ನು ಕೊಟ್ಟರ ಹೆಚ್ಚುವರಿಯಾಗಿ 30 % ಕೊಡುತ್ತೇವೆಂದು ನಂಬಿಸಿ ಹಣ ತರಲು ತಿಳಿಸಿದರು. ನಂತರ ಶ್ರೀಮತಿ ಕೃಪಾರವರು ಹತ್ತು ಲಕ್ಷ ಹಣವನ್ನು ತೆಗೆದುಕೊಂಡು ಸ್ನೇಹಿತ ಜನಾರ್ಧನ ಮತ್ತು ಭುವನೇಂದ್ರ ರವರೊಂದಿಗೆ ಕಾರಿನಲ್ಲಿ ಕಡೂರಿನ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಬಂದಾಗ ಮಹೇಶ, ವಿನಯ್ ತುಮಕೂರಿನ ಗಂಗಾಧರ, ಚಿಕ್ಕಮಗಳೂರಿನ ಇಲಿಯಾಜ್ ಇದ್ದರು .

ಅವರು ತಂದಿದ್ದ ರೂ. 10 ಲಕ್ಷ ಹಣವನ್ನು ತೆಗೆದುಕೊಂಡು ಬ್ಯಾಗಿನಲ್ಲಿ ರೂ. 13 ಲಕ್ಷ ಹಣ ಇದೆ, ಇಲ್ಲಿ ಜನ ಓಡಾಡುತ್ತಿದ್ದಾರೆ, ವಾಹನದಲ್ಲಿ ಹಣ ಎಣಿಸಿಕೊಳ್ಳಿ ಎಂದು ಹೇಳಿ ಆರೋಪಿಗಳು ಬ್ಯಾಗ್ ಕೊಟ್ಟು ಅಲ್ಲಿಂದ ಹೋಗಿದ್ದು. ಫಿರ್ಯಾದಾರರು ನಂತರ ಬ್ಯಾಗ್ ತೆಗೆದು ನೋಡಿದಾಗ ಪ್ರತಿಯೊಂದು ನೋಟಿನ ಕಂತುಗಳ ಮೇಲೆ ರೂ. 100 ಒಂದು ನೋಟು ಮಾತ್ರ ಇದ್ದು, ಉಳಿದಂತೆ ಬಿಳಿ ಪೇಪರ್ ಇದ್ದು.

ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ರೀತಿ ಮೋಸ ಮಾಡಿದ್ದ 6 ಜನ ಆರೋಪಿಗಳ ಪೈಕಿ 5 ಜನರನ್ನು PSI ಕಡೂರು ರಮ್ಯ ಎನ್ ಕೆ ರವರ ನೇತೃತದ ತಂಡ ಪತ್ತೆ ಹಚ್ಚಿ ದಸ್ತಗಿರಿ ಮಾಡಿ, ರೂ. 5.10 ಲಕ್ಷ ನಗದು, ಓಮ್ನಿ ಕಾರು, ಸ್ಕೂಟಿ ಮತ್ತು 4 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!