Saturday, May 4, 2024
Homeಕರಾವಳಿಬೆಳ್ತಂಗಡಿ : ವಿದ್ಯುತ್ ದುರುಪಯೋಗ ಮಾಡಿಕೊಂಡ ಪ್ರಕರಣ : ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷನ ಮನೆ...

ಬೆಳ್ತಂಗಡಿ : ವಿದ್ಯುತ್ ದುರುಪಯೋಗ ಮಾಡಿಕೊಂಡ ಪ್ರಕರಣ : ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷನ ಮನೆ ಮತ್ತು ಕಟ್ಟಡದ ಮೇಲೆ ಮೆಸ್ಕಾಂ ಜಾಗೃತ ದಳ ದಾಳಿ

spot_img
- Advertisement -
- Advertisement -

ಬೆಳ್ತಂಗಡಿ : ವಿದ್ಯುತ್ ಸಂಪರ್ಕ ನೀಡಿದ ವಿದ್ಯುತ್ ನಿಂದ ದುರುಪಯೋಗ ಮಾಡಿದ ಪ್ರಕರಣ ಸಂಬಂಧಿಸಿದಂತೆ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಮೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ನಾಗನಡ್ಕದ ನಿವಾಸಿ ಬೆಳ್ತಂಗಡಿ ಕಾಂಗ್ರೆಸ್ ಕಿಸನ್ ಸಂಘದ ಅಧ್ಯಕ್ಷರಾಗಿರುವ ಎನ್.ವಿ.ವ್ಯಾಸ ರಾವ್ ಮನೆಗೆ ನೀಡಿದ ವಿದ್ಯುತ್ ಸಂಪರ್ಕವನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಮಂಗಳೂರು ಮೆಸ್ಕಾಂ ಜಾಗೃತ ದಳದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತಂಡದ ಅಧಿಕಾರಿಗಳು ಏರ್ಟಿಗಾ ಕಾರಿನಲ್ಲಿ ಬಂದು ಇಂದು ಮಧ್ಯಾಹ್ನ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

ಕಳೆದ ಒಂದು ವರ್ಷದಿಂದ  ಕಮರ್ಶಿಯಲ್ ಕಟ್ಟಡದ ಹನ್ನೊಂದು ಸಾವಿರ ರೂಪಾಯಿ ಬಿಲ್ ಕಟ್ಟದೆ ಬಾಕಿ ಮಾಡಿದ್ದರಿಂದ ಕಟ್ಟಡದ ಕಮರ್ಶಿಯಲ್ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಕಟ್ ಮಾಡಿದ್ದರು. ಆದ್ರೆ ಇದನ್ನು ಕಟ್ಟದೆ ಸುಮ್ಮನಿದ್ದರು. ಇದಕ್ಕೆ ತಮ್ಮ ಮನೆಯ ಗೃಹ ಬಳಕೆ ವಿದ್ಯುತ್ ಸಂಪರ್ಕವನ್ನು ನೀಡಿ ಅಕ್ರಮವಾಗಿ ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡುತ್ತಿದ್ದರು ಎಂದು ಮಂಗಳೂರು ಮೆಸ್ಕಾಂ ಜಾಗೃತ ದಳಕ್ಕೆ ಶಿಶಿಲ ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರು ದೂರು ನೀಡಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಮೆಸ್ಕಾಂ ಜಾಗೃತ ದಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್  ನೇತೃತ್ವದ ತಂಡ  ಮನೆ ಮತ್ತು ಕಟ್ಟಡದ ದಾಳಿ ಮಾಡಿ ಪರಿಶೀಲನೆ ಮಾಡಿದ್ದು , ಕಟ್ಟಡ ಒಂದು ವರ್ಷದಿಂದ ಉಪಯೋಗಿಸದೆ ಬಂದ್ ಮಾಡಿರುವುದಾಗಿ ಮಾಲಕ ವ್ಯಾಸರಾವ್ ಅಧಿಕಾರಿಗಳಿಗೆ ತಿಳಿಸಿದ್ದು ನಂತರ ಮನೆ, ಕಟ್ಟಡ, ತೋಟಕ್ಕೆ ನೀಡಿರುವ ವಿದ್ಯುತ್ ಸಂಪರ್ಕ ನೀಡಿರುವ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದು ಈ ವೇಳೆ ಕೆಲವು ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸರಕಾರಕ್ಕೆ ಬಾಕಿ ಇರುವ ಮೊತ್ತ ಕಟ್ಟಲು ಸೂಚನೆ ನೀಡಿ ನೋಟಿಸ್ ಕೊಟ್ಟು ತೆರಳಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!