Saturday, April 13, 2024
Homeಉದ್ಯಮನಾಳೆಯಿಂದ ಜಾರಿಗೆ ಬರುವಂತೆ 10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ

ನಾಳೆಯಿಂದ ಜಾರಿಗೆ ಬರುವಂತೆ 10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ

spot_img
- Advertisement -
- Advertisement -

ಹತ್ತು ಸಾರ್ವಜನಿಕ ವಲಯದ (ಪಿಎಸ್‌ಯು) ಬ್ಯಾಂಕುಗಳನ್ನು ನಾಳೆ, ಏಪ್ರಿಲ್ 1 ರಿಂದ ನಾಲ್ಕು ಬ್ಯಾಂಕ್‌ಗಳಾಗಿ ವಿಲೀನ ಮಾಡಲಾಗುತ್ತಿದೆ. 2019 ರ ಆಗಸ್ಟ್ ನಲ್ಲಿ ಸರ್ಕಾರವು 10 ಸಾರ್ವಜನಿಕ ವಲಯದ ನಷ್ಟದಲ್ಲಿರುವ ಬ್ಯಾಂಕ್ ಗಳನ್ನು ನಾಲ್ಕು ದೊಡ್ಡ ಮತ್ತು ಬಲವಾದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿತ್ತು. ಇದರಿಂದಾಗಿ ಭಾರತದಲ್ಲಿ 2017ರಲ್ಲಿ ಇದ್ದ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆ 27 ರಿಂದ 12 ಕ್ಕೆ ಇಳಿಯಲಿದೆ.

-ಏಪ್ರಿಲ್ 1 ರಿಂದ ಜಾರಿಗೆ ಬರುವ ಬ್ಯಾಂಕುಗಳ ಮೆಗಾ ವಿಲೀನದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ

 • ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಜೊತೆ ವಿಲೀನಗೊಳಿಸಲಾಗುವುದು. ವಿಲೀನದ ಬಳಿಕ ಈ ಬ್ಯಾಂಕ್ ದೇಶದ 2ನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.
 • ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗುವುದು.
 • ಇಂಡಿಯನ್ ಬ್ಯಾಂಕ್ ಅನ್ನು ಅಲಹಾಬಾದ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುವುದು.
 • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲಾಗುವುದು.
 • ವಿಲೀನಗೊಳ್ಳುವ ಬ್ಯಾಂಕುಗಳ ಠೇವಣಿದಾರರು ಸೇರಿದಂತೆ ಗ್ರಾಹಕರನ್ನು ವಿಲೀನಗೊಳಿಸಿದ ಬ್ಯಾಂಕುಗಳ ಗ್ರಾಹಕರಂತೆ ಪರಿಗಣಿಸಲಾಗುತ್ತದೆ.
 • ವಿಲೀನದ ನಂತರ, 12 ಸಾರ್ವಜನಿಕ – ಆರು ವಿಲೀನಗೊಂಡ ಬ್ಯಾಂಕುಗಳು ಮತ್ತು ಆರು ಸ್ವತಂತ್ರ ಸಾರ್ವಜನಿಕ ವಲಯದ ಬ್ಯಾಂಕುಗಳು ಇರುತ್ತವೆ.
 • ವಿಲೀನಗೊಂಡ ಬ್ಯಾಂಕುಗಳು – ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್.
 • ಸ್ವತಂತ್ರ ಬ್ಯಾಂಕುಗಳು – ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
 • ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ನಾಳೆಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ.
 • ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕಿನ ಶಾಖೆಯಾಗಿ 1 ಏಪ್ರಿಲ್ 2020 ರಿಂದ ಕಾರ್ಯನಿರ್ವಹಿಸಲಿದೆ.
 • ಎಲ್ಲಾ ಅಲಹಾಬಾದ್ ಬ್ಯಾಂಕ್ ಶಾಖೆಗಳನ್ನು ಇಂಡಿಯನ್ ಬ್ಯಾಂಕಿನ ಶಾಖೆಗಳಾಗಿ ಪರಿಗಣಿಸಲಾಗುತ್ತದೆ
 • ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕಿನ ಎಲ್ಲಾ ಶಾಖೆಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಾಗಿ 2020 ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

- Advertisement -
spot_img

Latest News

error: Content is protected !!