- Advertisement -
- Advertisement -
ಬೆಳ್ತಂಗಡಿ: ತುಲುನಾಡ್ ಒಕ್ಕೂಟ ಬೆಳ್ತಂಗಡಿ ಇದರ ಕೋಶಾಧಿಕಾರಿ ಮತ್ತು ಕೊಟ್ಯಾನ್ ಟೈಲರ್ಸ್ ಸಂತೆಕಟ್ಟೆಯ ಮಾಲಕರಾದ ಸುರೇಂದ್ರ ಕೊಟ್ಯಾನ್ ಕೆಲ್ಲಕೆರೆ ಇವರು ಮಹಾಮಾರಿ ಕೊರೊನದ ವಿರುದ್ಧ ಹೋರಾಡಲು ಸ್ವತಃ ತಾವೇ ಮಾಸ್ಕ್ ತಯಾರಿಸಿ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸುತ್ತಿದ್ದಾರೆ.
ಯಾವುದೇ ರೀತಿಯ ಫಲಾಪೇಕ್ಷೆಯನ್ನು ನೀರಿಕ್ಷಿಸದೆ ಸುರೇಂದ್ರ ಕೊಟ್ಯಾನ್ ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ದೇಶದ ಶ್ರೀಮಂತರು ಅವರ ಶಕ್ತಿಯ ಅನುಸಾರ ಕೊರೊನ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ಹಣವನ್ನು ನೀಡುತ್ತಿದ್ದಾರೆ. ಇವರ ಮದ್ಯೆ ಹೃದಯ ಶ್ರೀಮಂತಿಕೆ ಇರುವ ಸುರೇಂದ್ರ ಕೊಟ್ಯಾನ್ ಕೆಲ್ಲಕೆರೆ ಮಾಡುತ್ತಿರುವ ಸಮಾಜಮುಖಿ ಕೆಲಸ ನಿಜಕ್ಕೊ ಸಮಾಜಕ್ಕೆ ಮಾದರಿ.
- Advertisement -