Sunday, June 7, 2026
Homeಅಪರಾಧ9 ವರ್ಷ ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವತಿ; ಮನನೊಂದ ಯುವಕ ಆತ್ಮಹತ್ಯೆ

9 ವರ್ಷ ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವತಿ; ಮನನೊಂದ ಯುವಕ ಆತ್ಮಹತ್ಯೆ

- Advertisement -
- Advertisement -

ಚಿಕ್ಕಮಗಳೂರು: ಇಲ್ಲಿನ ಎನ್.ಆರ್.ಪುರ ತಾಲೂಕಿನ ಶಂಕರಪುರದಲ್ಲಿ ಯುವತಿ 9 ವರ್ಷಗಳ ಕಾಲ ಪ್ರೀತಿಸಿ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಚೇತನ್ (31) ಆತ್ಮಹತ್ಯೆಗೆ ಶರಣಾದ ಯುವಕ.


ಚೇತನ್ ಆತ್ಮಹತ್ಯೆ ಮಾಡಿಕೊಳ್ಳೋದಕ್ಕಿಂತ ಮುಂಚೆ ಸಂಬಂಧಿಕರಿಗೆ ವಾಯ್ಸಮೆಸೇಜ್ ಕಳುಹಿಸಿ ಗಾನವಿ ಎಂಬ ಯುವತಿ ತನಗೆ ಮೋಸ ಮಾಡಿದ್ದಾಳೆ. ಕಳೆದ 9 ವರ್ಷಗಳಿಂದ ನಾನು ಹಾಗೂ ಗಾನವಿ ಪರಸ್ಪರ ಪ್ರೀತಿಸಿತ್ತಿದ್ದೆವು. ಆದರೆ ಈಗ ಆಕೆ ಮದುವೆ ನಿರಾಕರಿಸಿದ್ದಾಳೆ.ಅಲ್ಲದೇ ನನ್ನಿಂದ ಗಾನವಿ 4 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದಳು ಎಂದು ಮೆಸೇಜ್ ಕಳುಹಿಸಿ ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಅಲ್ಲದೇ ಚೇತನ್ ಬರೆದಿರುವ ಡೆತ್ ನೋಟ್ ಕೂಡ ಲಭ್ಯವಾಗಿದ್ದು, ನನ್ನ ಸಾವಿಗೆ ನ್ಯಾಯ ಸಿಗಬೇಕು ಎಂದರೆ ಗಾನವಿಗೆ ಶಿಕ್ಷೆಯಾಗಲಿ, ನನಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ.ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!