Sunday, May 5, 2024
Homeತಾಜಾ ಸುದ್ದಿಪಂಚಾಯತ್ ಗಳಲ್ಲಿ ಹೆಂಡತಿ ಬದಲು ಗಂಡನ ಅಧಿಕಾರಕ್ಕೆ ಬ್ರೇಕ್ ! ; ಮಹಿಳಾ ಸದಸ್ಯರ ಅಧಿಕಾರದಲ್ಲಿ...

ಪಂಚಾಯತ್ ಗಳಲ್ಲಿ ಹೆಂಡತಿ ಬದಲು ಗಂಡನ ಅಧಿಕಾರಕ್ಕೆ ಬ್ರೇಕ್ ! ; ಮಹಿಳಾ ಸದಸ್ಯರ ಅಧಿಕಾರದಲ್ಲಿ ಕುಟುಂಬದ ಹಸ್ತಕ್ಷೇಪವಾದರೆ ಸದಸ್ಯತ್ವ ರದ್ದು

spot_img
- Advertisement -
- Advertisement -

ಬೆಂಗಳೂರು: ಗ್ರಾಮ ಪಂಚಾಯತ್ ಗಳಲ್ಲಿ ಚುನಾಯಿತರಾಗಿರುವ ಪತ್ನಿಯ ಬದಲು ಪತಿ ಅಧಿಕಾರ ನಡೆಸಿದಲ್ಲಿ ಪತ್ನಿ ಸದಸ್ಯತ್ವವೇ ರದ್ದಾಗಲಿದೆ.

ಈ ಬಗ್ಗೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಅನಧಿಕೃತ ಅಧಿಕಾರ ಚಲಾಯಿಸುವ ಪುರುಷರಿಂದ ಮಹಿಳೆಯರ ಸದಸ್ಯತ್ವಕ್ಕೆ ಕುತ್ತು ಬರಲಿದೆ.

ಮಹಿಳಾ ಜನಪ್ರತಿನಿಧಿಗಳ ಆಡಳಿತದಲ್ಲಿ ಅವರ ಪತಿ ಹಾಗೂ ಕುಟುಂಬಸ್ಥರು ಹಸ್ತಕ್ಷೇಪ ಮಾಡಿದಲ್ಲಿ ಮಹಿಳಾ ಸದಸ್ಯೆಯ ಸದಸ್ಯತ್ವವನ್ನೇ ರದ್ದು ಮಾಡುವುದಾಗಿ ರಾಜ್ಯ ಸರ್ಕಾರ ಸೂಚಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 110(ಎ) ಯಂತೆ ಪಂಚಾಯತ್ ಸದಸ್ಯರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸದೇ ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಪ್ರತಿನಿಧಿಗಳ ಪತಿ ಅಥವಾ ಕುಟುಂಬ ಸದಸ್ಯರು, ಗ್ರಾಮ ಪಂಚಾಯತಿ ವಿಷಯಗಳಲ್ಲಿ, ಕಾರ್ಯನಿರ್ವಹಣೆಯಲ್ಲಿ, ಸಭೆಗಳಲ್ಲಿ ಗ್ರಾಮ ಪಂಚಾಯತಿ ಅಧಿಕಾರಿ, ನೌಕರರ ವಿಷಯಗಳಲ್ಲಿ ಅಥವಾ ಗ್ರಾಮ ಪಂಚಾಯತಿಯ ಯಾವುದೇ ಕಡತ, ಸಂಬಂಧಿಸಿದ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಅಂತಹ ಮಹಿಳಾ ಚುನಾಯಿತ ಪ್ರತಿನಿಧಿಗಳ ವಿರುದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41(ಎ) ಮತ್ತು ಪ್ರಕರಣ 48(4) ರ ಅಡಿಯಲ್ಲಿ ಸೂಕ್ತ ತನಿಖೆ ನಡೆಸಿ ಆರೋಪ ಸಾಬೀತಾದರೆ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡುವುದಾಗಿ ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಎಲ್ಲ ಗ್ರಾಮ ಪಂಚಾಯತಿಗಳಿಗೆ ಆದೇಶಿಸಿದ್ದಾರೆ.

ಗ್ರಾಮ ಸ್ವರಾಜ್ ಕಾಯ್ದೆಯಲ್ಲಿ ಮಹಿಳಾ ಸದಸ್ಯರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಗಂಡ ಮತ್ತು ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದರೂ, ಈ ಬಗ್ಗೆ ದೂರು ಸಲ್ಲಿಸಿದರೂ ಅದು ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದ್ದರಿಂದ ಬಹುತೇಕರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಹೆಚ್ಚಾಾಗಿತ್ತು.

ಹೀಗಾಗಿ ಇದನ್ನು ತಪ್ಪಿಸಲು ಈಗ ಮಹಿಳಾ ಸದಸ್ಯರ ಅಧಿಕಾರದಲ್ಲಿ ಹಸ್ತಕ್ಷೇಪದ ದೂರು ಕೇಳಿ ಬಂದರೆ ಇಲಾಖೆಯ ಮುಖ್ಯಸ್ಥರೇ ತನಿಖೆಗೆ ಆದೇಶಿಸಿ ಸೂಕ್ತ ದಾಖಲೆಗಳ ಸಮೇತ ಸಾಬೀತಾದರೆ ಅವರೇ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡಲು ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

- Advertisement -
spot_img

Latest News

error: Content is protected !!