Saturday, May 18, 2024
Homeತಾಜಾ ಸುದ್ದಿಬೆಂಗಳೂರು: 5 ರೂ. ಡಾಕ್ಟರ್‌ಗೆ ಓಪನ್ ಹಾರ್ಟ್ ಸರ್ಜರಿ

ಬೆಂಗಳೂರು: 5 ರೂ. ಡಾಕ್ಟರ್‌ಗೆ ಓಪನ್ ಹಾರ್ಟ್ ಸರ್ಜರಿ

spot_img
- Advertisement -
- Advertisement -

ಬೆಂಗಳೂರು: 5 ರೂ.ಡಾಕ್ಟರ್ ಎಂದರೆ ಖ್ಯಾತರಾಗಿರುವ ಶಂಕರೇಗೌಡ ಅವರಿಗೆ ಇಂದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ.


ಇಂದು ಪೋರ್ಟೀಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆಗೆ ಶಂಕರೇಗೌಡರನ್ನು ಆಪರೇಷನ್ ಥೇಟರ್‌ಗೆ ಕರೆದುಕೊಂಡು ಹೋಗಲಾಗಿತ್ತು. 8 ಮಂದಿ ನುರಿತ ವೈದ್ಯರ ತಂಡ ಸರ್ಜರಿ ಮಾಡಿದೆ.


ಕಳೆದ ಒಂದು ತಿಂಗಳ ಹಿಂದೆ ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿತ್ತು. ಈ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯದ ಮೂರು * ರಕ್ತನಾಳಗಳು ಬ್ಲಾಕ್ ಆಗಿದ್ದರಿಂದ ತಾತ್ಕಾಲಿಕವಾಗಿ ಸ್ಟಂಟ್ ಅಳವಡಿಸಲಾಗಿತ್ತು. ಇದೀಗ ಹೃದ್ರೋಗ ತಜ್ಞರ ಸಲಹೆ ಮೇರೆಗೆ ಇದೀಗ ಶಂಕರೇಗೌಡರು ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!