Wednesday, May 15, 2024
Homeತಾಜಾ ಸುದ್ದಿಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ ಕನ್ನಡದಲ್ಲಿ ಇಲ್ಲ

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ ಕನ್ನಡದಲ್ಲಿ ಇಲ್ಲ

spot_img
- Advertisement -
- Advertisement -

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬದುಕಿನ ಕುರಿತಾಗಿ ‘ಮೇಜರ್’ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಇದೇ ಜೂ.03ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಕನ್ನಡಿಗರು ಬೇರೆ ಭಾಷೆಯಲ್ಲಿಯೇ ನೋಡಬೇಕಾಗಿದೆ. 

ಮೂಲತಃ ಮಲಯಾಳಿ ಆದರೂ, ಕನ್ನಡಿಗರೇ ಆಗಿ ಹೋಗಿದ್ದ ಸಂದೀಪ್ ಉನ್ನಿಕೃಷ್ಣನ್ ಬೆಂಗಳೂರಿನಲ್ಲೇ ಬಾಳಿ ಬದುಕಿದವರು. ಕೊನೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದಾಗಲೂ ಅವರ ಸಮಾಧಿಯನ್ನು ಬೆಂಗಳೂರಿನಲ್ಲೇ ಮಾಡಲಾಗಿದೆ. ಈ ಹೊತ್ತಿಗೂ ಸಂದೀಪ್ ಅವರ ಕುಟುಂಬ ಬೆಂಗಳೂರಿನಲ್ಲೇ ನೆಲೆಯೂರಿದೆ. ಕನ್ನಡಿಗರ ನೆಚ್ಚಿನ ಮೇಜರ್ ಆಗಿದ್ದ ಸಂದೀಪ್ ಅವರ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ.

ಮೇಜರ್ ಸಿನಿಮಾದ ಪ್ರಚಾರಕ್ಕೆಂದು ಸಿನಿಮಾ ತಂಡ ಬೆಂಗಳೂರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಕನ್ನಡದಲ್ಲಿ ಯಾಕೆ ಈ ಸಿನಿಮಾ ಬರುತ್ತಿಲ್ಲ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕೆ ಎದುರಾಗಿತ್ತು. ಆದರೆ ಚಿತ್ರತಂಡ ಸ್ಸಾರಿ ಕನ್ನಡದಲ್ಲಿ ಸಿನಿಮಾವನ್ನು ಮಾಡುವುದಕ್ಕೆ ಆಗಲಿಲ್ಲ ಎಂದಷ್ಟೇ ಉತ್ತರ ನೀಡಿತ್ತು. ಕನ್ನಡಿಗರೇ ಆಗಿದ್ದ ಸಂದೀಪ್ ಅವರ ಬಗ್ಗೆ ಕನ್ನಡದಲ್ಲೇ ಸಿನಿಮಾ ನೋಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಆದರೆ, ಈ ಸಿನಿಮಾವನ್ನು ಪರಭಾಷೆಯಲ್ಲಿ ನೋಡುವುದು ಅನಿವಾರ್ಯವಾಗಿದೆ.

ಸಂದೀಪ್ ಉನ್ನಿಕೃಷ್ಣ ಅವರ ಬಯೋಪಿಕ್ ಗೆ ‘ಮೇಜರ್’ ಎಂದು ಹೆಸರಿಡಲಾಗಿದ್ದು, ತೆಲುಗಿನ ನಟ ಅರಿವಿ ಶೇಷ ಅವರು ಸಂದೀಪ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಖ್ಯಾತ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ಈ ಸಿನಿಮಾದ ಹಿಂದಿದ್ದಾರೆ.

- Advertisement -
spot_img

Latest News

error: Content is protected !!