Sunday, June 7, 2026
Homeತಾಜಾ ಸುದ್ದಿಡ್ರಗ್ಸ್‌ ಜಾಲದಲ್ಲಿ ಚಿರಂಜೀವಿ ಸರ್ಜಾ ಹೆಸರು ತಳುಕು: ಮೇಘನಾ ರಾಜ್ ಹೇಳಿದ್ದೇನು?

ಡ್ರಗ್ಸ್‌ ಜಾಲದಲ್ಲಿ ಚಿರಂಜೀವಿ ಸರ್ಜಾ ಹೆಸರು ತಳುಕು: ಮೇಘನಾ ರಾಜ್ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು: ಗುರುವಾರ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಾಜ್ಯ ರಾಜಧಾನಿಯಲ್ಲಿ ಬೃಹತ್​​ ಡ್ರಗ್ಸ್​ ಜಾಲವನ್ನ ಭೇದಿಸಿದ್ದು, ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್ ನಟ-ನಟಿಯರು ಸೇರಿದಂತೆ ಗಾಯಕ- ಸಂಗೀತ ನಿರ್ದೇಶಕರ ಹೆಸ್ರುಗಳು ಕೇಳಿ ಬರ್ತಿವೆ. ಇದರ ಬೆನ್ನಲ್ಲೇ ಹಿರಿಯ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇತ್ತಿಚಿಗೆ ಸಾವನ್ನಪ್ಪಿದ ಯುವ ನಟನ ಸಾವಿನ ಮರಣೋತ್ತರ ಪರೀಕ್ಷೆಯ ಬಗ್ಗೆ ಪ್ರಶ್ನೆ ಎತ್ತಿದ್ರು. ಅವರೆಲ್ಲೂ ಹೆಸ್ರು ಬಿಟ್ಟು ಕೊಡದೇ ಹೋದ್ರು ಅವ್ರು ಚಿರಂಜೀವಿ ಸರ್ಜಾರ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು.

ಇಂದ್ರಜಿತ್‌ ಅವ್ರ ಈ ಪ್ರಶ್ನೆಯ ಕುರಿತಾಗಿ ನಿನ್ನೆ ದಿನಪೂರ್ತಿ ಹಲವು ಚರ್ಚೆಗಳು ನಡೆದಿದ್ವು. ಚರ್ಚೆಯಲ್ಲಿ ಸಮಾಜ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಚಿರಂಜೀವಿ ಸರ್ಜಾ ಪರ ಮಾತನಾಡುತ್ತಿದ್ರು. ಸಧ್ಯ ಪ್ರಶಾಂತ್‌ ಸಂಬರಗಿ ತಮ್ಮ ವಾಟ್ಸ್ ಆಪ್ ಚಾಟ್‌ ಬಹಿರಂಗ ಪಡೆಸಿದ್ದು, ಚಿರು ಹೆಂಡತಿ ಮೇಘನಾ ಸರ್ಜಾ ಅವರ ಜೊತೆ ನಡೆಸಿದ ಸಂಭಾಷಣೆಯನ್ನ ಬಹಿರಂಗ ಪಡೆಸಿದ್ದಾರೆ.

” ಡ್ರಗ್ಸ್‌ ಜಾಲದಲ್ಲಿ ಚಿರು ಹೆಸರು ಹೇಳಿ ಬರುತ್ತಿರುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ. ಇಂದ್ರಜೀತ್‌ ಲಂಕೇಶ್‌ ಚಿರು ತೇಜೋವಧೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಇದ್ರಿಂದ ಅವ್ರಿಗೆ ಏನು ಲಾಭ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ಈಗ ಚಿರಂಜೀವಿ ಬಗ್ಗೆ ಮಾತನಾಡಿದರೇ ಉತ್ತರ ನೀಡಲು ಅವ್ರಿಲ್ಲ. ಈ ಮಾತು ಕೇಳಿ ನನಗೆ ತುಂಬಾನೇ ನೋವಾಗಿದೆ. ಟಿವಿಯಲ್ಲಿ ಚಿರು ಪೋಟೊ ನೋಡಿದ್ರೆ ಕಣ್ಣೀರು ಬರುತ್ತೆ “ಎಂದಿದ್ದಾರೆ.

- Advertisement -

Latest News

error: Content is protected !!