Thursday, June 4, 2026
Homeಕರಾವಳಿಉಡುಪಿಮಲ್ಪೆ: ಮೆಡಿಕಲ್‌ ಶಾಪ್‌ ಉದ್ಯೋಗಿ ನಾಪತ್ತೆ

ಮಲ್ಪೆ: ಮೆಡಿಕಲ್‌ ಶಾಪ್‌ ಉದ್ಯೋಗಿ ನಾಪತ್ತೆ

- Advertisement -
- Advertisement -

ಮಲ್ಪೆ: ಮಲ್ಪೆಯ ಕೆಮ್ಮಣ್ಣು ನಿವಾಸಿ, ಮಣಿಪಾಲದಲ್ಲಿ ಮೆಡಿಕಲ್ ಶಾಪ್ ಉದ್ಯೋಗಿಯಾಗಿದ್ದ, ಪ್ರವೀಣ್ ಬೆಲ್ಟಡ ಎಂಬುವರು ನಿನ್ನೆ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಮಗನಿಂದ ದೂರವಾಗಿದ್ದ ಇವರು ಒಂಟಿಯಾಗಿ ವಾಸಿಸುತ್ತಿದ್ರು ಎನ್ನಲಾಗಿದೆ.

ಅ.18 ರಂದು ರಾತ್ರಿ ಪ್ರವೀಣ್ ಅವರ ಸಹೋದರಿ ಕರೆ ಮಾಡಿ ಊಟಕ್ಕೆ ಬರುವಂತೆ ಹೇಳಿದ್ರು. ಆದ್ರೆ ಬರ್ತೀನಿ ಇಲ್ಲವಾದಲ್ಲಿ ಬೆಳಿಗ್ಗೆ ಬರುವುದಾಗಿ ಪ್ರವೀಣ್ ತಿಳಿಸಿದ್ದರು. ಆದರೆ ಅ.19 ರಂದು ಬೆಳಿಗ್ಗೆ ಕರೆ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಳಿಕ ಪ್ರವೀಣ್‌ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!