Sunday, June 7, 2026
Homeಕರಾವಳಿಮಂಗಳೂರುಬಂಟ್ವಾಳ: ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿ ; ಗಂಭೀರ ಗಾಯಗೊಂಡು ಮೆಕ್ಯಾನಿಕ್ ಸಾವು

ಬಂಟ್ವಾಳ: ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿ ; ಗಂಭೀರ ಗಾಯಗೊಂಡು ಮೆಕ್ಯಾನಿಕ್ ಸಾವು

- Advertisement -
- Advertisement -

ಬಂಟ್ವಾಳ: ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಮೆಕ್ಯಾನಿಕ್ ಸಾವನ್ನಪ್ಪಿರುವ ಘಟನೆ ಬಿ.ಸಿ .ರೋಡ್ ಗಾಣದಪಡ್ಪುನಲ್ಲಿ ನಡೆದಿದೆ. ಬೋಳಂತೂರು ನಿವಾಸಿ ಜಬ್ಬಾರ್   (33) ಮೃತ ವ್ಯಕ್ತಿ.


ಅವಿವಾಹಿತನಾಗಿರುವ ಜಬ್ಬಾರ್ ಅವರು ಗಾಣದಪಡ್ಪು ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಕಾರ್ಮಿಕನಾಗಿದ್ದು, ಆಟೋ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ಇಂದು ಹೆದ್ದಾರಿಯ ಬದಿಯಲ್ಲಿ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ವೇಣೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಬೈಪಾಸ್ ಕಡೆಯಿಂದ ಕಾರಿನಲ್ಲಿ ಬಂದು ಢಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಜಬ್ಬಾರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!