Friday, August 28, 2026
Homeಕರಾವಳಿಮಂಗಳೂರುಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್‌ ಲೋಬೋ ಮಧ್ಯಂತರ ಜಾಮೀನು ಅರ್ಜಿ ವಜಾ

ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್‌ ಲೋಬೋ ಮಧ್ಯಂತರ ಜಾಮೀನು ಅರ್ಜಿ ವಜಾ

- Advertisement -
- Advertisement -

ಮಂಗಳೂರು: ಸಾಲಗಾರನಿಗೆ ಕಿರುಕುಳ ನೀಡಿ ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರೆಸ್ಟ್ ಆಗಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್‌ ಲೋಬೋ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿದೆ.
ತಾನು ನಿರಪರಾಧಿಯಾಗಿದ್ದು ಇಡೀ ಪ್ರಕರಣ ಕಟ್ಟುಕಥೆಯಾಗಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಅನಿಲ್ ಲೋಬೋ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.  ಈ ಹಂತದಲ್ಲಿ ಜಾಮೀನು ನೀಡುವುದಕ್ಕೆ ಯಾವುದೇ ನ್ಯಾಯಯುತ ಆಧಾರ ಕಂಡುಬರುವುದಿಲ್ಲ ಎಂದು ಕೋರ್ಟ್‌ ಹೇಳಿ ಅರ್ಜಿ ತಿರಸ್ಕರಿಸಿದೆ. ಮುಂದಿನ ಪ್ರಧಾನ ಅರ್ಜಿ ವಿಚಾರಣೆ ಡಿ.27ರಂದು ನಡೆಯಲಿದೆ.

- Advertisement -

Latest News

error: Content is protected !!