Wednesday, June 26, 2024
HomeWorldಲೂಧಿಯಾನ ಕೋರ್ಟ್ ಸ್ಫೋಟದ ಮಾಸ್ಟರ್ ಮೈಂಡ್ ಜರ್ಮನಿಯಲ್ಲಿ ಅರೆಸ್ಟ್

ಲೂಧಿಯಾನ ಕೋರ್ಟ್ ಸ್ಫೋಟದ ಮಾಸ್ಟರ್ ಮೈಂಡ್ ಜರ್ಮನಿಯಲ್ಲಿ ಅರೆಸ್ಟ್

spot_img
- Advertisement -
- Advertisement -

ನವದೆಹಲಿ: ಪಂಜಾಬ್ ರಾಜ್ಯದ ಲೂಧಿಯಾನ ಕೋರ್ಟ್‌ ಕಾಂಪ್ಲೆಕ್ಸ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಸಿಖ್ ಉಗ್ರವಾದಿ ಸಂಘಟನೆಯ ವ್ಯಕ್ತಿಯನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ.

ಸಿಖ್ ಫಾರ್ ಜಸ್ಟಿಸ್ ಎನ್ನುವ ಸಂಘಟನೆಯ ಸದಸ್ಯನಾಗಿರುವ ಜಸ್ವಿಂದರ್ ಸಿಂಗ್ ಮುಲ್ತಾನ್ ಎಂಬಾತನನ್ನು ಬರ್ಲಿನ್ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಸಾಕ್ಷ್ಯ ಮತ್ತು ಸ್ಫೋಟಕ್ಕೆ ಸಂಚು ನಡೆಸಿರುವುದರಲ್ಲಿ ಮುಲ್ತಾನ್ ಪಾತ್ರದ ಬಗ್ಗೆ ಪಂಜಾಬ್ ಪೊಲೀಸರು ಬರ್ಲಿನ್ ಉಗ್ರ ನಿಗ್ರಹ ದಳಕ್ಕೆ ಒಪ್ಪಿಸಿದ್ದರು. ಅದರಂತೆ, ಕಾರ್ಯಾಚರಣೆ ನಡೆಸಿದ ಬರ್ಲಿನ್ ಪೊಲೀಸರು ಜಸ್ವಿಂದರ್ ಸಿಂಗ್ ನನ್ನು ಬಂಧಿಸಿದ್ದಾರೆ.

ಪಾಕಿಸ್ಥಾನದಿಂದ ಇನ್ನಷ್ಟು ಸ್ಫೋಟಕಗಳನ್ನು ಗಡಿಭಾಗದ ಮೂಲಕ ಭಾರತಕ್ಕೆ ತಂದು ವಿವಿಧ ಕಡೆಗಳಲ್ಲಿ ಇದೇ ಮಾದರಿಯ ಬಾಂಬ್ ಬ್ಲಾಸ್ಟ್ ನಡೆಸುವುದಕ್ಕೆ ಪ್ಲಾನ್ ಹಾಕಿದ್ದ, ಕಳೆದ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ಥಾನ ಗಡಿಭಾಗ ಪಂಜಾಬ್ ರಾಜ್ಯದ ತಾರನ್ ತರನ್‌ ಜಿಲ್ಲೆಯ ಖೇಮ್ ಕರನ್ ಎಂಬ ಪ್ರದೇಶದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿತ್ತು. ಅದನ್ನು ಗಡಿಭದ್ರತಾ ಪಡೆ ಬಳಿಕ ವಶಕ್ಕೆ ಪಡೆದುಕೊಂಡಿತ್ತು. ಸ್ಫೋಟಕ ರವಾನೆಯ ಹಿಂದೆಯೂ ಜಸ್ವಿಂದರ್ ಸಿಂಗ್ ಪಾತ್ರ ಇದೆಯೆಂದು ಪೊಲೀಸರು ಶಂಕಿಸಿದ್ದಾರೆ. 22 ಪಿಸ್ತೂಲ್, 44 ಮ್ಯಾಗಜಿನ್, 100 ರೌಂಡ್‌ ಸ್ಫೋಟಕ ಮತ್ತು ಕೆಜಿ ತೂಗುವ ಹೆರಾಯಿನ್ ದ್ರವ್ಯವನ್ನು ವಶಕ್ಕೆ ಪಡೆಯಲಾಗಿತ್ತು.

ಜಸ್ವಿಂದರ್ ಸಿಂಗ್ ಮುಲ್ತಾನ್ ಪಾಕಿಸ್ಥಾನದ ಐಎಸ್‌ಐ ಜೊತೆ ನೇರ ಲಿಂಕ್ ಹೊಂದಿದ್ದಾನೆ. ಡಿ.23ರಂದು ಮಧ್ಯಾಹ್ನ ಲೂಧಿಯಾನ ಕೋರ್ಟ್‌ ಕಟ್ಟಡದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಘಟನೆಯಲ್ಲಿ ಒಬ್ಬ ಮೃತಪಟ್ಟು ಇತರ ಐವರು ಗಾಯಗೊಂಡಿದ್ದರು, ಕೋರ್ಟ್ ಕಟ್ಟಡದ ಒಳಭಾಗದಲ್ಲಿ ಗೋಡೆಗಳು, ವಾಶ್ ರೂಮ್ ಛಿದ್ರವಾಗಿ ಬಿದ್ದಿತ್ತು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಆನಂತರ ತನಿಖೆ ನಡೆಸಿದ್ದ ಪೊಲೀಸರು ಮೃತ ವ್ಯಕ್ತಿಯನ್ನು ಮಾಜಿ ಪೊಲೀಸ್ ಸಿಬ್ಬಂದಿ ಗಗನ್ ದೀಪ್ ಸಿಂಗ್ ಎಂದು ಗುರುತಿಸಿದ್ದರು. ಮಾಜಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಗಗನ್ ದೀಪ್ ಸಿಂಗ್ ಡ್ರಗ್ ಡೀಲರ್ ಜೊತೆಗೆ ಲಿಂಕ್ ನಲ್ಲಿ ಸಿಕ್ಕಿಬಿದ್ದು ಜೈಲು ಶಿಕ್ಷೆಗೆ ಗುರಿಯಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ವಜಾ ಮಾಡಲಾಗಿತ್ತು. ಆತನೇ ಸ್ಫೋಟಕ ಇಟ್ಟು ತೆರಳುತ್ತಿದ್ದಾಗ ಬ್ಲಾಸ್ ಆಗಿತ್ತು ಅನ್ನೋದ್ರ ಬಗ್ಗೆ ತನಿಖಾ ಏಜನ್ಸಿಗಳು ದೃಢಪಡಿಸಿವೆ.

ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ತನಿಖಾ ತಂಡ ಗಗನ್ ದೀಪ್ ಬಗ್ಗೆ ತನಿಖೆ ಆರಂಭಿಸಿದಾಗ, ಪಾಕಿಸ್ಥಾನದ ಐಎಸ್‌ಐ ಲಿಂಕ್ ಇರುವುದನ್ನು ಪತ್ತೆ ಮಾಡಿತ್ತು. ಇದೇ ವೇಳೆ, ಗಗನ್ ದೀಪ್ ನಾಪತ್ತೆಯಾಗಿದ್ದು ಮತ್ತು ಇದಕ್ಕೂ ಎಸ್ಎಫ್ ಜೆ ಸದಸ್ಯರಾಗಿರುವ ಹರ್ವಿಂದರ್ ಸಿಂಗ್ ಮತ್ತು ಜರ್ಮನಿಯಲ್ಲಿ ನೆಲೆಸಿರುವ ಜಸ್ವಿಂದರ್ ಸಿಂಗ್ ಪಾತ್ರ ಕಂಡುಬಂದಿತ್ತು. ಇವರಿಬ್ಬರು ಕೂಡ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಅಧ್ಯಕ್ಷ ಅವತಾರ್ ಸಿಂಗ್ ಪುನ್ನು ಮತ್ತು ಹರ್ಮಿತ್ ಸಿಂಗ್ ನೇರ ಸಂಪರ್ಕ ಹೊಂದಿದ್ದುದು ಪತ್ತೆಯಾಗಿತ್ತು.

- Advertisement -
spot_img

Latest News

error: Content is protected !!