Monday, June 24, 2024
Homeತಾಜಾ ಸುದ್ದಿಮುಲ್ಕಿ: “ಈಶ್ವರಪ್ಪನನ್ನು ಸಂಪುಟದಿಂದ ಹೊರದಬ್ಬಿ ತನಿಖೆ ನಡೆಸಿ”: ಮಾಜಿ ಸಚಿವ ಅಭಯಚಂದ್ರ ಜೈನ್

ಮುಲ್ಕಿ: “ಈಶ್ವರಪ್ಪನನ್ನು ಸಂಪುಟದಿಂದ ಹೊರದಬ್ಬಿ ತನಿಖೆ ನಡೆಸಿ”: ಮಾಜಿ ಸಚಿವ ಅಭಯಚಂದ್ರ ಜೈನ್

spot_img
- Advertisement -
- Advertisement -

ಮುಲ್ಕಿ: ಉಡುಪಿ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ರವರ ಡೆತ್ ನೋಟ್ ನಲ್ಲಿ ದಾಖಲಿಸಿದಂತೆ  ಆತ್ಮಹತ್ಯೆಗೆ ಕಾರಣಕರ್ತರಾದ ಸಚಿವ ಈಶ್ವರಪ್ಪ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಮತ್ತು ಬಿಜೆಪಿ ಸರ್ಕಾರದ 40 ಪರ್ಸೆಂಟ್ ದಂಧೆ ವಿರೋಧಿಸಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಮುಲ್ಕಿ ತಹಶಿಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಗುತ್ತಿಗೆದಾರ ಸಂತೋಷ್ ಕೊಲೆಯಲ್ಲಿ ಭಾಗಿಯಾದ ಸಚಿವ ಈಶ್ವರಪ್ಪ ನನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಹಾಗೂ ಕೂಡಲೇ ಬಂಧಿಸಬೇಕು ಎಂದರು. ಹಾಗೇ ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದ್ದು ಭ್ರಷ್ಟಾಚಾರಿ ಹಾಗೂ ಕೊಲೆ-ಆರೋಪಿ ಈಶ್ವರಪ್ಪ ಮನೆಯಲ್ಲಿ ಕೌಂಟಿಂಗ್ ಮೆಷಿನ್ ಇಟ್ಟುಕೊಂಡಿದ್ದೇನೆ ಎಂದು ಈಗಾಗಲೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂದ್ರು.

ಪಾಕಿಸ್ತಾನದಲ್ಲಿ ಭ್ರಷ್ಟಾಚಾರಿ ಪ್ರಧಾನಿ ಇಮ್ರಾನ್ ಖಾನ್ ನನ್ನು ಹೊರದಬ್ಬಿದ ಹಾಗೆ ಈಶ್ವರಪ್ಪನನ್ನ ಸಂಪುಟದಿಂದ ಹೊರದಬ್ಬಿ ತನಿಖೆ ನಡೆಸಬೇಕು. ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಸರ್ಕಾರ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಾಗಟೆ ಹಿಡಿದು ತಹಶೀಲ್ದಾರ್ ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸುವುದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಮಂತ್ರಿಗಳ ವಿರುದ್ಧ ಕಪ್ಪು ಬಾವುಟ ತೋರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಅಂದ್ರು.

- Advertisement -
spot_img

Latest News

error: Content is protected !!