Thursday, June 25, 2026
Homeಇತರಯಾತ್ರೆಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ವಿವಾಹಿತ ಮಹಿಳೆಗೆ ಮುಸ್ಲಿಂ ಯುವಕನೊಂದಿಗೆ ಮತ್ತೊಂದು ಮದುವೆ...!

ಯಾತ್ರೆಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ವಿವಾಹಿತ ಮಹಿಳೆಗೆ ಮುಸ್ಲಿಂ ಯುವಕನೊಂದಿಗೆ ಮತ್ತೊಂದು ಮದುವೆ…!

- Advertisement -
- Advertisement -

ಕೋಲ್ಕತಾ: ಗುರುನಾನಕ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಿಖ್ಬ ಜಾಥಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತಾ ಮೂಲದ ವಿವಾಹಿತ ಮಹಿಳೆಯೊಬ್ಬಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಲಾಹೋರ್ ಮೂಲದ ವ್ಯಕ್ತಿಯನ್ನು ವಿವಾಹವಾಗಿರುವ ಘಟನೆ ನಡೆದಿದೆ.

ಸಿಖ್ಬ ಯಾತ್ರಾರ್ಥಿಗಳ ಜತೆ ತೆರಳಿದ್ದ ಕೋಲ್ಕತಾ ಮೂಲದ ರಂಜಿತ್ ಕೌರ್ ಎಂಬಾಕೆ ಇಸ್ಲಾಂಗೆ ಮತಾಂತರಗೊಂಡು, ಲಾಹೋರ್ ಮೂಲದ ಮುಹಮ್ಮದ್ ಇಮ್ರಾನ್ ಎಂಬಾತನನ್ನು ವಿವಾಹವಾಗಿದ್ದಾಳೆ.

ರಂಜಿತ್ ಕೌರ್ ಮತ್ತು ಆಕೆಯ ಪತಿ ಪರಮ್ ದೀಪ್ ಸಿಂಗ್ ಕಿವುಡ ಮತ್ತು ಮೂಕರಾಗಿದ್ದು, ಮುಹಮ್ಮದ್ ಇಮ್ರಾನ್ ಕೂಡಾ ಕಿವುಡ ಮತ್ತು ಮೂಗನಾಗಿರುವುದಾಗಿ ವರದಿ ಹೇಳಿದೆ. ರಂಜಿತ್ ಕೌರ್ ತನ್ನ ಹೆಸರನ್ನು ಪರ್ವೀನ್ ಸುಲ್ತಾನಾ ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

ಪಾಕಿಸ್ತಾನದ ಕೋರ್ಟ್ ನಲ್ಲಿ ಭಾರತೀಯ ಮೂಲದ ಪತಿಯಿಂದ ರಂಜಿತ್ ಕೌರ್ ವಿಚ್ಛೇದನ ಪಡೆದುಕೊಂಡ ನಂತರ ಲಾಹೋರ್ ನಲ್ಲಿ ಇಮ್ರಾನ್ ಜತೆ ವಿವಾಹವಾಗಿದೆ.

- Advertisement -

Latest News

error: Content is protected !!