- Advertisement -
- Advertisement -
ಕರ್ನಾಟಕ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಿ.ಸುನೀಲ್ ಕುಮಾರ್‌ರವರು ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಡಿಸೆಂಬರ್ 18 ರಿಂದ 26 ರವರಿಗೆ ಅದ್ದೂರಿಯಾಗಿ ‘ಕಾರ್ಕಳ ಉತ್ಸವ’ ನಡೆಯಲಿದೆ.
ಮೆರವಣಿಗೆಗೆ ಚಾಲನೆ ನೀಡಲಿರುವ ಸಿಎಂ. ಡಿ.24ರಂದು ಕಾರ್ಕಳ ಉತ್ಸವದ ಚಾಲನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಈ ಮೆರವಣಿಗೆಯಲ್ಲಿ ಕನ್ನಡ ನಾಡಿನ ಇತಿಹಾಸ ನೆಲ,ಜಲವನ್ನು ಪರಿಚಯಿಸುವ ಕಲೆ,ಸಂಸ್ಕೃತಿ, ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳು, ನೃತ್ಯ ಎಲ್ಲವೂ ಈ ಭವ್ಯಮೆರವಣಿಗೆಯಲ್ಲಿ ಇರಲಿವೆ.
ಸಾಂಸ್ಕೃತಿಕ ವೇದಿಕೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಡಿ.20ಕ್ಕೆ ಹೆಬ್ರಿ, ಬೆಳ್ಮಣ್, ಬಜಗೋಳಿಯಲ್ಲಿ. ಡಿ.21ಕ್ಕೆ ಅಜೆಕಾರು, ಬೈಲೂರಿನಲ್ಲಿ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ತಂಡಗಳಿಂದ ನಡೆಯಲಿದೆ. ಇದಕ್ಕಾಗಿ ಈಗಿಂದಲೇ ಭರದಿಂದ ಕಾಮಗಾರಿ ಕೆಲಸಗಳು ನಡೆಯುತ್ತಿವೆ.
- Advertisement -