Friday, May 3, 2024
HomeWorldಮಂಗಳೂರು ಸೇರಿ ಸಮುದ್ರದಂಚಿನ ಹನ್ನೆರಡು ನಗರಗಳು ಮುಳುಗಡೆ?; ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ನಾಸಾ!

ಮಂಗಳೂರು ಸೇರಿ ಸಮುದ್ರದಂಚಿನ ಹನ್ನೆರಡು ನಗರಗಳು ಮುಳುಗಡೆ?; ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ನಾಸಾ!

spot_img
- Advertisement -
- Advertisement -

ಮಂಗಳೂರು: ಈ ಶತಮಾನದ ಅಂದರೆ 2100ನೇ ಇಸವಿ ಒಳಗಾಗಿ ಮಂಗಳೂರು ಸೇರಿದಂತೆ ಭಾರತದ ಸಮುದ್ರದಂಚಿನ 12 ನಗರಗಳು ಮುಳುಗಲಿವೆ ಆಘಾತಕಾರಿ ಎಚ್ಚರಿಕೆ ಸಂದೇಶವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.

ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಸೋಮವಾರ ಬಿಡುಗಡೆ ಮಾಡಿರುವ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ, ಭಾರತಕ್ಕೆ ಈ ಮುನ್ನೆಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.

ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು ನೀಡಿರುವ ಮಾಹಿತಿಗಳನ್ನು ತಾಳೆ ಹಾಕಿರುವ ನಾಸಾ, ಈಗಿನ ದಿನಗಳಲ್ಲಿ ಸಮುದ್ರ 2 ಅಡಿಯಷ್ಟು ಏರುತ್ತದೆ. ಶತಮಾನದ ಅಂತ್ಯದೊಳಗೆ ಇದು ಮತ್ತಷ್ಟುತೀವ್ರಗೊಂಡರೆ, 2100ರ ಅಂತ್ಯಕ್ಕೆ 3 ಅಡಿಯಷ್ಟು ಸಮುದ್ರ ಮಟ್ಟಏರಿಕೆಯಾಗಿ ಈ ನಗರಗಳು ಮುಳುಗಲಿವೆ ಎಂದು ತಿಳಿಸಿದೆ. 1988 ರಿಂದೀಚೆಗೆ, ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚಾಗಿದ್ದರಿಂದ ಹಿಮಚ್ಛಾದಿತ ಪ್ರದೇಶಗಳಲ್ಲಿ ಹಿಮಕರಗಿ ಸಮುದ್ರ ಸೇರುತ್ತಿದೆ.

2050ರೊಳಗೆ ಸಮುದ್ರದ ನೀರಿನ ಮಟ್ಟ ಪ್ರತೀ 5ರಿಂದ 7 ವರ್ಷದಲ್ಲಿ ಹೆಚ್ಚಾಗಬಹುದು. ಇದರಿಂದ ಈ ಶತಮಾನದ ಅಂತ್ಯಕ್ಕೆ ಮಂಗಳೂರು, ಮುಂಬೈ, ಮರ್ಮಗೋವಾ, ಕೊಚ್ಚಿ, ಪಾರಾದೀಪ್‌, ಖಿದೀರ್‌ಪುರ, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಭಾವನಗರ, ಒಖಾ, ನಗರಗಳು ಮುಳುಗಡೆಯಾಗುತ್ತವೆ ಎಂದಿದೆ.

ಇದಲ್ಲದೆ, ತಗ್ಗುಪ್ರದೇಶಗಳಿಗೆ ಸಾಗರ ನೀರು ನುಗ್ಗುವುದು, ಪ್ರತೀ 100 ವರ್ಷಕ್ಕೊಮ್ಮೆ ಆಗುತ್ತಿದ್ದ ಕರಾವಳಿ ಭೂ ಸವಕಳಿ ಇನ್ನು ಪ್ರತೀ ವರ್ಷ ಘಟಿಸುತ್ತದೆ. ಕರಾವಳಿಯಲ್ಲಾಗುವ ಈ ಬದಲಾವಣೆ, ಗುಡ್ಡಗಾಡು ಪ್ರದೇಶ, ಬಯಲು ಸೀಮೆಗಳಲ್ಲಿನ ಹವಾಗುಣದ ಮೇಲೂ ದುಷ್ಪರಿಣಾಮ ಬೀರಿ, ಅತೀ ಶೀತ ಗಾಳಿ, ಅತ್ಯುಷ್ಣ ಗಾಳಿಯ ಹಾವಳಿ ಜಾಸ್ತಿಯಾಗುತ್ತದೆ ಎಂದು ನಾಸಾ ವಿವರಿಸಿದೆ.

- Advertisement -
spot_img

Latest News

error: Content is protected !!