Thursday, July 10, 2025
Homeಕರಾವಳಿಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗು ದಾರುಣ ಮೃತ್ಯು

ಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗು ದಾರುಣ ಮೃತ್ಯು

spot_img
- Advertisement -
- Advertisement -

ಕಾಸರಗೋಡು: ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ವಿಜಯ ಹಾಗೂ ಪುತ್ರ ಆಶ್ರಯ್

ಬೋಳಂತಕೋಡಿ ನಿವಾಸಿ,ಅಟೋ ಚಾಲಕ ವಿಶ್ವನಾಥ ಎಂಬವರ ಪತ್ನಿ ವಿಜಯ(30)ಹಾಗೂ ಪುತ್ರ ಆಶ್ರಯ್(6) ಮೃತ ಪಟ್ವರೆಂದು ತಿಳಿದುಬಂದಿದೆ. ಮನೆಯ ಪಕ್ಕದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಅಚಾನಕ್ ಸ್ಪರ್ಶಿಸಿದ್ದ ಪುತ್ರನನ್ನು ರಕ್ಷಿಸುವ ಸಲುವಾಗಿ ಧಾವಿಸಿದ ತಾಯಿ ಕೂಡ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದೆ ಘಟನೆಗೆ ಕಾರಣವಾಯಿತು.

ವಿದ್ಯುತ್ ಆಘಾತಗೊಂಡು ಇಬ್ಬರೂ ಸ್ಥಳದಲ್ಲೇ ಮ್ರತಪಟ್ಟರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು. ಮಂಜೇಶ್ವರ ಪೋಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿದರು.ಕೆಲ ದಿನಗಳ ಹಿಂದೆ ತಂತಿ ಕಡಿದು ಬಿದ್ದಿದ್ದನ್ನು ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದರೂ ಇಲಾಖೆಯು ದುರಸ್ಥಿ ಕಾರ್ಯ ನಡೆಸಿಲ್ಲ ಎನ್ನಲಾಗಿದೆ.

- Advertisement -
spot_img

Latest News

error: Content is protected !!