Monday, July 1, 2024
Homeಕರಾವಳಿಬೆಂಗಳೂರಿನಲ್ಲಿ ಕೊಲೆಯಾದ ಮನೀಷ್ ಶೆಟ್ಟಿ ಮತ್ತು ಆತನಿಗಿದ್ದ ಅಂಡರ್ ವಲ್ಡ್ ನಂಟಿನ ಕುರಿತ ಸ್ಪೆಷಲ್ ಸ್ಟೋರಿ...

ಬೆಂಗಳೂರಿನಲ್ಲಿ ಕೊಲೆಯಾದ ಮನೀಷ್ ಶೆಟ್ಟಿ ಮತ್ತು ಆತನಿಗಿದ್ದ ಅಂಡರ್ ವಲ್ಡ್ ನಂಟಿನ ಕುರಿತ ಸ್ಪೆಷಲ್ ಸ್ಟೋರಿ !

spot_img
- Advertisement -
- Advertisement -

ಮಂಗಳೂರು: ಮನೀಶ್ ಕೊಲೆಯನ್ನು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಮಾಡಿಸಿದ್ದಾಗಿ ಆತನೇ ಕರೆ ಮಾಡಿ ಹೇಳಿಕೊಂಡಿದ್ದಾನೆ. ಅಷ್ಟಕ್ಕೂ ಈ ಮನೀಷ್ ಶೆಟ್ಟಿಯ ಹಿಸ್ಟರಿ ಏನು. ಆತನ ಕಾರ್ಯಕ್ಷೇತ್ರಗಳು ಯಾವುವು. ಆತನಿಗೆ ಇದ್ದ ಭೂಗತಲೋಕದ ನಂಟಿನ ಆಳ ಎಷ್ಟು ಗೊತ್ತಾ. ಕಡಲನಗರಿ ಮಂಗಳೂರಿಗೂ ಮನೀಷ್ ಶೆಟ್ಟಿಗೂ ಇರೋ ಕ್ರಿಮಿನಲ್ ನಂಟೇನು ಅನ್ನೊ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

ಬೆಂಗಳೂರಿ‌ನಲ್ಲಿ ಶೂಟೌಟ್ ಗೆ ಬಲಿಯಾದ ಮನೀಷ್ ಶೆಟ್ಟಿ ಕರಾವಳಿ ಭಾಗದವನು. ಚಿಕ್ಕಮಗಳೂರಿನ ಕೊಪ್ಪ ಮೂಲದವನಾದ್ರು ಆತ ವಾಸ ಇದ್ದಿದ್ದು ಉಡುಪಿಯಲ್ಲಿ. ಮನೀಷ್ ಶೆಟ್ಟಿ ಉಡುಪಿ, ಮಂಗಳೂರು, ಕೇರಳದ ಕಾಸರಗೋಡು, ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ ಮುಂಬೈ, ತಮಿಳುನಾಡು, ಆಂದ್ರಪ್ರದೇಶಗಳನಲ್ಲಿ ತನ್ನ ಕ್ರಿಮಿನಲ್ ಚಟುವಟಿಕೆ ನಡೆಸಿದ್ದ. ಮನೀಶ್ ಎರಡು ಸಾವಿರ ಇಸವಿಯಿಂದ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ಮಹಮ್ಮದ್ ಕುನ್ಹಿ ಮನೆ‌ ಮೇಲೆ ಶೂಟೌಟ್ ನಡೆದ ದಿನದ ಫೋಟೋ

ಈತ ಆರಂಭಿಕ ಹಂತದಲ್ಲಿ ಕಳ್ಳನಾಗಿದ್ದ. ಬಳಿಕ ಚಿನ್ನಾಭರಣ ಕಳ್ಳನಾದ. ಆಗ ಪರಿಚಯವಾದ ಗ್ಯಾಂಗ್ ನಿಂದ ಸಿಕ್ಕಿದ್ದೇ ಭೂಗತ ಪಾತಕಿ ನಟೋರಿಯಸ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಲಿಂಕ್. ಆತನ ಅಣತಿಯಂತೆ‌ ಕೆಲಸ ಮಾಡುವ ಗ್ಯಾಂಗ್ ನ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದ‌. ಬೆಂಗಳೂರಿನ ಚೆಮ್ಮನೂರು ಜುವೆಲರ್ಸ್ ದರೋಡೆ ಸೇರಿದಂತೆ ಹಲವಾರು ಜುವೆಲರ್ ಗೆ ಕನ್ನ ಹಾಕಿದ್ದ. 2010 ರ ಆಗಸ್ಟ್ 27 ರಂದು ಬೆವಿಂಜೆ ಗುತ್ತಿಗೆದಾರ ಎಂ ಟಿ ಮೊಹಮ್ಮದ್ ಕುನ್ಹಿ ಅವರ ಮನೆಯಲ್ಲಿ ಗುಂಡು ಹಾರಿಸಲು ಸಂಚು ರೂಪಿಸಿದ್ದ. ಅಂದು ಕಾಸರಗೋಡು ನ್ಯಾಯಾಲಯದಲ್ಲಿ ಜೈಲುವಾಸ ಅನುಭವಿಸುತ್ತಿದ್ದ. ಇದಕ್ಕೂ ಮೊದಲು ಈತ ಭೂಗತ ಪಾತಕಿ ಕೊರಗು ವಿಶ್ವನಾಥ್ ಶೆಟ್ಟಿ ಸಹಚರ ಅಗಿದ್ದ.

ಉಡುಪಿ ಮೂಲದ ಭೂಗತ ಪಾತಕಿ ಕೊರಗು ವಿಶ್ವನಾಥ್ ಶೆಟ್ಟಿ

ನಂತರ ಜೈಲಿನಲ್ಲಿ ಸಹಕೈದಿಗಳ ಸ್ನೇಹದಿಂದ ಪಾತಕಿ ರವಿ ಪೂಜಾರಿ ಸಹಚರನಾಗಿದ್ದ ನಂತರ ಮತ್ತೆ ಜೈಲಿನಲ್ಲಿ ಸಹಕೈದಿಗಳಿಂದ ಪಾತಕಿ ಕಲಿ ಯೋಗೀಶ್ ಜೊತೆ ಸೇರಿಕೊಂಡ. ಬಳಿಕ ಭೂಗತ ಪಾತಕಿ ರವಿ ಪೂಜಾರಿಯ ತಂಡ ಸೇರಿಕೊಂಡಿದ್ದ. 2011 ರಲ್ಲಿ ರವಿ ಪೂಜಾರಿ ಹಫ್ತಾ ಹಣಕ್ಕಾಗಿ ಕಾಸರಗೋಡು ಪ್ರಭಾಕರ ಚೌಟ ಎಂಬ ಉದ್ಯಮಿಗೆ ಕೊಲೆ ಬೆದರಿಕೆ ಹಾಕಿದ್ದ. ನಂತರ ವಿಟ್ಲ ಪೊಲೀಸರ ಕೈಗೆ ಕರೋಪಾಡಿಯಲ್ಲಿ ಅನುಮಾನಸ್ಪದವಾಗಿ ನಾಲ್ಕು ಆರೋಪಿಗಳು ಸಮೇತ ಎರಡು ಪಿಸ್ತೂಲ್ ಸಿಕ್ಕಿತ್ತು ವಿಚಾರಣೆ ವೇಳೆ ಪ್ರಭಾಕರ ಚೌಟ ಕೊಲೆಗೆ ಸಂಚು ಮಾಡುತ್ತಿರುವುದು ನಮ್ಮನ್ನು ಮನೀಶ್ ಶೆಟ್ಟಿ ಕಳುಹಿಸಿರುವುದಾಗಿ ಹೇಳಿದ್ದರು. ಪ್ರಕರಣದ ಆರೋಪದಲ್ಲಿ ಎರಡು ಪಿಸ್ತೂಲ್ ಸೇರಿ ಮಹಮ್ಮದ್ ಹನೀಪ್, ರಿಯಾಝ್, ವಿಶ್ವನಾಥ , ರಘನಾಥ ನಾಲ್ಕು ಜನರನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.

ಭೂಗತ ಪಾತಕಿ ಕಲಿ ಯೋಗೀಶ್

ಮನೀಶ್ ಶೆಟ್ಟಿ ಅವರ ಸಹಚರರಾದ ಪೈವಾಲಿಕ ಬಾಯಾರ್ ನಿವಾಸಿ ಪುಟ್ಟು ಅಲಿಯಾಸ್ ಅಬ್ದುಲ್ಲಾ ಹಮೀದ್ (40) ಮತ್ತು ಕುರುದಪದವ ನಿವಾಸಿ ಮೊಹಮ್ಮದ್ ಅಲಿ ಅಲಿಯಾಸ್ ಮುನ್ನಾ (35) ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು.

ಜೂನ್ 25, 2010 ಮೊಹಮ್ಮದ್ ಕುನ್ಹಿ ಮನೆಯ ಮೇಲೆ ನಡೆದ ಶೂಟೌಟ್ ಘಟನೆಯಲ್ಲಿ ಇವರ ಗುಂಪು 50 ಕೋಟಿ ರೂ.ಗಳ ಸುಲಿಗೆ ಮಾಡಿತ್ತು. 50 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಗೆ ತನ್ನ ಸಹಚರರ ಮೂಲಕ ಕಳುಹಿಸಿದ್ದ.

ದಾವುದ್ ಇಬ್ರಾಹಿಂ ಸಂಪರ್ಕ ದಿಂದ ಅಷ್ಟು ಲಾಭವಿಲ್ಲದೇ ಬಳಿಕ ಭೂಗತ ಪಾತಕಿಯಾಗಿದ್ದ ರವಿ ಪೂಜಾರಿ ಬಾಲ ಹಿಡಿದಿದ್ದ.

ಬನ್ನಂಜೆ ರಾಜ ಜೈಲು ಪಾಲಾದ ಬಳಿಕ ಭೂಗತ ಪಾತಕಿ ರವಿ ಪೂಜಾರಿ ಜೊತೆ ನಂಟಿಟ್ಟುಕೊಂಡು ಆತನ ಅಣತಿಯಂತೆ ಕರ್ನಾಟಕದ ವಿವಿಧ ಕಡೆ ಕೆಲಸ ಮಾಡಿದ್ದ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014 ರಲ್ಲಿ ರವಿ ಪೂಜಾರಿ ಅಣತಿಯಂತೆ ಪ್ರಭಾಕರ ಚೌಟ ಎಂಬುವವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಮನೀ಼ಷ್ ಶೆಟ್ಟಿಗೆ ಮಾದಕ ಲೋಕದ ನಂಟು ಕೂಡ ಇತ್ತು. ಮುಂಬೈನ ಡ್ರಗ್ ಪೆಡ್ಲರ್ ಸಂತೋಷ್ ಶೆಟ್ಟಿಯ ಸಹಚರ ಕೂಡ ಈತನಾಗಿದ್ದ.

ಇನ್ನು ಈ ಕೊಲೆಯನ್ನು ಮಾಡಿಸಿರೋದು ಭೂಗತ ಪಾತಕಿ ವಿಕ್ಕಿಶೆಟ್ಟಿ. ವಿಕ್ಕಿ ಶೆಟ್ಟಿಯ ಸಹಚರನಾಗಿದ್ದ ಮನೀಷ್ ಶೆಟ್ಟಿ ಇತ್ತೀಚೆಗೆ ವಿಕ್ಕಿಶೆಟ್ಟಿ ಹುಡುಗರ ವಿರೋಧ ಕಟ್ಟಿಕೊಂಡಿದ್ದ. ಇತ್ತೀಚೆಗೆ ಉಡುಪಿಯಲ್ಲಿ ಕೊಲೆಯಾದ ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಶಂಕೆ ಅಂತಾ ಹೇಳಲಾಗುತ್ತಿದೆ. ಮಂಗಳೂರು ಕೊಡಿಕೆರೆ ಮನೋಜ್ ಗ್ಯಾಂಗ್ ಈ ಕೊಲೆಯನ್ನು ಮಾಡಿತ್ತು. ಮನೋಜ್ ಗೆ ಇದೇ ಮನೀಷ್ ಶೆಟ್ಟಿ ಸಹಕಾರ ನೀಡುತ್ತಿದ್ದ.

ಕೆಲ ಸಮಯದ ಹಿಂದೆ‌ ಉಡುಪಿಯಲ್ಲಿ ಕಾರ್ಕಳದ ಕಿಶನ್ ಹೆಗ್ಡೆ ಕೊಲೆ ಮಾಡಿದ ರಿವೆಂಜ್ ಮಾಡಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಗ್ಯಾಂಗ್ ನಿಂದ ಮನೀಶ್ ಶೆಟ್ಟಿಯ ಕೊಲೆ ಆಗಿದೆ ಅಂತಾ ಹೇಳಲಾಗಿದೆ‌. ಕಿಶನ್ ಹೆಗ್ಡೆ ಅಣ್ಣ ಬಳ್ಳಾರಿ ಜೈಲಿನಲ್ಲಿ ಇದ್ದಾನೆ. ಆತ ವಿಕ್ಕಿಶೆಟ್ಟಿಗೆ ತುಂಬಾ ಆಪ್ತನಾಗಿದ್ದಾನೆ. ಅಲ್ಲಿದೆ ಮನೀಶ್ ಕೂಡ ತನ್ನ ಬಣವನ್ನು ಬಿಟ್ಟಿದ್ರಿಂದ ವಿಕ್ಕಿಶೆಟ್ಟಿ ಆತನಿಗೆ ಸ್ಕೆಚ್ ಹಾಕಿದ್ದ. ಇನ್ನು ಕಿಶನ್ ಹೆಗ್ಡೆ ಅಣ್ಣ ಹಾಗೂ ವಿಕ್ಕಿ ಶೆಟ್ಟಿ ಅಣತಿಯಂತೆ‌ ಮನೀಷ್ ಕೊಲೆಯಾಗಿದೆ ಅಂತಾ ಹೇಳಿಲಾಗಿದೆ.

ಮನೀಷ್ ಶೆಟ್ಟಿ ಮಂಗಳೂರಿನಲ್ಲಿ ರೌಡಿಶೀಟರ್ ಕೂಡ ಆಗಿದ್ದ. ಮಂಗಳೂರು ಸೇರಿದಂತೆ ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲಿ 60 ಕ್ಕೂ ಹೆಚ್ಚು ಕೇಸ್ ಈತನ ಮೇಲೆ ಇತ್ತು. ಅದರಲ್ಲಿ ಕೊಲೆ, ಶೂಟೌಟ್, ಕೊಲೆಯತ್ನ, ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಕೇಸ್ ಗಳಿದ್ದವು‌. ಇನ್ನು ಭೂಗತ ಜಗತ್ತಿನೊಂದಿಗೆ ನಂಟಿದ್ದ ಮನೀಷ್ ಶೆಟ್ಟಿಯನ್ನು ಭೂಗತ ಜಗತ್ತೆ ಕೊಂದು ಹಾಕಿದ್ದು ವಿಪರ್ಯಾಸ. ಇನ್ನೂ ಈ ಕೊಲೆ ಪ್ರಕರಣ ಭೇದಿಸಲು ಪೊಲೀಸರ 9 ತಂಡ ರಚಿಸಲಾಗಿದ್ದು ಬೇರೆ ಬೇರೆ ಅಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!