- Advertisement -
- Advertisement -
ಮಣಿಪಾಲ : ಮಣಿಪಾಲದ ಆದರ್ಶ ನಗರ ಲೇಕ್ ವ್ಯೂ ಹೋಟೆಲ್ ಬಳಿ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾರ್ಪಳ್ಳಿಯ ಸುನೀಲ್ ಶೇರಿಗಾರ (36) ಹಾಗೂ ಸಣ್ಣಕ್ಕಿಬೆಟ್ಟುವಿನ ಸುಧೀರ್ ನಾಯ್ಕ (28) ಎಂವರು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಹಾಗೂ ಮದ್ಯ, ಎರಡು ಮೊಬೈಲ್, 4,230 ರೂ. ನಗದು, ರಿಕ್ಷಾವನ್ನು ವಶ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -