Wednesday, June 24, 2026
Homeಆರಾಧನಾಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಫೆ.06ಕ್ಕೆ ಕಾಲಾವಧಿ ಮೆಚ್ಚಿ ಜಾತ್ರೆ

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಫೆ.06ಕ್ಕೆ ಕಾಲಾವಧಿ ಮೆಚ್ಚಿ ಜಾತ್ರೆ

- Advertisement -
- Advertisement -

ಮಾಣಿ: ಬಂಟ್ವಾಳ ತಾಲೂಕಿನ ಮಾಣಿಯ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸದ ಪ್ರಯುಕ್ತ “ಕಾಲಾವಧಿ ಮೆಚ್ಚಿ ಜಾತ್ರೆ” ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ. 30 ರಿಂದ ಫೆ. 06 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಪ್ರಮುಖ ಕಾರ್ಯಕ್ರಮಗಳ ವಿವರ: ಜೂನ್ 30, ಶುಕ್ರವಾರ ಬೆಳಿಗ್ಗೆ 8.30ಕ್ಕೆ ‘ಗೋನೆಮುಹೂರ್ತ’ ಮತ್ತು ಕೋಳಿ ಗುಂಟ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಫೆಬ್ರವರಿ 3, ಮಂಗಳವಾರ: ಬೆಳಿಗ್ಗೆ ಚಪ್ಪರ ಮುಹೂರ್ತ ಹಾಗೂ ಹಾಳೆಗೆ ಹೊರಡುವುದು, ಸಂಜೆ ‘ಪ್ರಥಮ ಚೆಂಡು’ ಉತ್ಸವ ನಡೆಯಲಿದೆ.ಫೆಬ್ರವರಿ 5, ಗುರುವಾರ: ಮಾಣಿಗುತ್ತಿನಲ್ಲಿ ಗಣಹೋಮ, ತಂಬಿಲ ಹಾಗೂ ರಾತ್ರಿ 9.00 ಗಂಟೆಗೆ ಭಂಡಾರ ಏರುವುದು. ನಂತರ ರಾತ್ರಿ 11.00ಕ್ಕೆ ಧ್ವಜಾರೋಹಣ ನೆರವೇರಲಿದೆ.ಫೆಬ್ರವರಿ 6, ಶುಕ್ರವಾರ (ಜಾತ್ರಾ ಮಹೋತ್ಸವ): ಬೆಳಿಗ್ಗೆ ಶ್ರೀ ಬ್ರಹ್ಮರ ಸೇವೆ ಹಾಗೂ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ. ಸಂಜೆ ದೈವಗಳ ನೇಮ ನಡೆಯಲಿದೆ.

ಮಾಣಿಗುತ್ತು ಕುಟುಂಬಿಕರು, ಮಾಣಿ-ಅರೆಬೆಟ್ಟು ಗ್ರಾಮಸ್ಥರು ಮತ್ತು ದೈವ ಪರಿಚಾರಕರು ಈ ಭಕ್ತಿಪೂರ್ವಕ ಉತ್ಸವಕ್ಕೆ ಭಕ್ತಾದಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

- Advertisement -

Latest News

error: Content is protected !!